ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸ ವರ್ಷ ಆಚರಣೆ

0
48

ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ ಬಿ ದಲ್ಲಿ ನೂತನ ವರ್ಷದ ಮೊದಲನೆಯ ದಿನ ಅಂಗವಾಗಿ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಅಬ್ದುಲ್ ಅಜೀಜ್ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಿಸಿದರು.

ಈ ವೇಳೆಯಲ್ಲಿ ಅಜಿಮ್ ಪ್ರೇಮ್ಜಿ ಸಮುದಾಯ ಮೇಲ್ವಿಚಾರಕರಾದ ಗುರುನಾಥ್ ಪ್ರಾಸ್ತಾವಿಕ ಮಾತನಾಡಿ ಹೊಸ ವರ್ಷದ ಶುಭಾಶಯ ತಿಳಿಸಿ ಈ ವರ್ಷ ಸಂತೋಷ ವರ್ಷವಾಗಲಿ, ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮಗೆ ಸಕ್ರಿಯವಾಗಿ ಸಹಕರಿಸಿದ ಕ್ಕಾಗಿ ಧನ್ಯವಾದ ತಿಳಿಸಿದರು.

Contact Your\'s Advertisement; 9902492681

ತದನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ನೂತನ ವರ್ಷದ ಸಂಭ್ರಮಾಚರಣೆ ಎಲ್ಲರಿಗೂ ಒಳಿತನ್ನು ಮಾಡಲಿ, ತಮ್ಮೆಲ್ಲರಿಗೆ ಆಯಸ್ಸು, ಆರೋಗ್ಯ, ಹೊಸ ಹೊಸ ಸಂಕಲ್ಪ , ಹೊಸ ಕನಸುಗಳ ಜೊತೆಜೊತೆಗೆ ಕೋಪ, ದ್ವೇಷ, ಇವೆಲ್ಲವನ್ನು ಬಿಟ್ಟು ಎಲ್ಲರಿಗೂ ನಗು ಪ್ರೀತಿ , ಹಂಚುತ್ತಾ ಹೊಸ ವರ್ಷ ಸ್ವಾಗತಿಸೋಣ ಎಂದು ಹೇಳಿದರು.ಕೊರೋನಾ ಮುಕ್ತವಾಗುವ ಲ್ಲಿ ಅಜಿಮ್ ಪ್ರೇಮ್ಜಿ ಅವರ ಸಹಕಾರ ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಜಿಮ್ ಪ್ರೇಮ್ಜಿ ಕಾರ್ಯಕ್ರಮ ಸಂಯೋಜನಾಧಿಕಾರಿ ಉದಯಕುಮಾರ್ ಬೇಕಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಅಜಿಮ್ ಪ್ರೇಮ್ಜಿ ಎಲ್ಲಾ ಗೊಬ್ಬುರ್ ವಲಯದ ಸಿಬ್ಬಂದಿಗಳು ಭಾಗವಹಿಸಿ ನೂತನ ಸಂಭ್ರಮದ ಆಚರಣೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here