ಸುರಪುರ: ನಾಡಿನ ಹಿರಿಯ ನ್ಯಾಯವಾದಿಗಳಾದ ದಿ. ಉಸ್ತಾದ್ ಸಾದತ್ ಹುಸೇನ್ ಅವರಿಗೆ ಸುರಪುರದ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ ಅವರು ಮಾತನಾಡಿ ಉಸ್ತಾದ್ ಸಾದತ್ ಹುಸೇನ್ ರು ನನ್ನ ಬಾಲ್ಯದ ಸ್ನೇಹಿತರು ಹಾಗೂ ದಿ ಎ ಕೃಷ್ಣ ,ದಿ ಪ್ರತಾಪಸಿಂಗ್ ಠಾಕೂರ, ಬಾಲರಾಜ್ ರತ್ನಗಿರಿ ಹೀಗೆ ಅನೇಕ ಮಿತ್ರರೊಂದಿಗೆ ಒಡನಾಟವಿತ್ತು. ಅವರು ಮುಂದಿನ ದಿನಗಳಲ್ಲಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿ, ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರು ತಮ್ಮ ಬಾಲ್ಯ ಸ್ನೇಹಿತರನ್ನು ಸದಾಕಾಲ ನೆನಪಿನಲ್ಲಿಟ್ಟು ಗೌರವದಿಂದ ಕಾಣುತ್ತಿದ್ದರು. ಇಂತಹ ಪ್ರಖ್ಯಾತ ನ್ಯಾಯವಾದಿ ಮಿತ್ರರು ನಮ್ಮನ್ನಗಲಿದ್ದು ವಿಷಾದನೀಯ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುವೆನೆಂದರು.,
ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ ಜೆ.ಅಗಸ್ಟೀನ್ ಮಾತನಾಡಿ ದಿ. ಉಸ್ತಾದ್ ಸಾದತ್ ಹುಸೇನ್ ರ ಬಗ್ಗೆ ಮಾತಾನಾಡುತ್ತಾ ಅವರೊಬ್ಬ ಪ್ರಖ್ಯಾತ ನ್ಯಾವಾದಿಗಳಾಗಿದ್ದು ಕಲ್ಯಾಣ ಕರ್ನಾಟಕದ ಎಲ್ಲಾ ನ್ಯಾಯಾಲಯಗಳಲ್ಲಿ ಅವರ ಶಿಷ್ಯರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇದು ಅವರ ಹೆಗ್ಗಳಿಕೆ.
ಕನ್ನಡ ಸಾಹಿತ್ಯ ಸಂಘದ ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ ಜಾಲವಾದಿ ಮಾತನಾಡಿ, ದಿ. ಉಸ್ತಾದ್ ಸಾದತ್ ಹುಸೇನ್ ರ ಬಗ್ಗೆ ಮಾತನಾಡುತ್ತಾ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ್ದು ಬಡ ಜನರ ಬಗ್ಗೆ ಅಪಾರ ಅತಕರಣ ಉಳ್ಳವರಾಗಿದ್ದರು ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಅವರ ಸೇವೆ ಸಂದಿದೆ ಎಂದು ಹೇಳಿದರು.
ಸಭೆಯಲ್ಲಿದ್ದ ಶ್ರೀಹರಿರಾವ ಅದೊನಿ ಪತ್ರಕರ್ತ ಕಲೀಂ ಫರೀದಿ, ನ್ಯಾಯವಾದಿ ನಿಂಗಣ್ಣ ಚಿಂಚೋಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಯಲಲಿತಾ ಪಾಟೀಲ, ದೇವೇಂದ್ರಪ್ಪ ಬೆವಿನಕಟ್ಟಿ ಎಲ್ಲಪ್ಪ ಹುಲಕಲ್ ರಾಮನಗೌಡ ಸುಬೇದಾರ ನಬೀಲಾಲ್ ಮಕಾನದಾರ ಎ.ಕಮಲಾಕರ ಪ್ರಕಾಶಚಂದ ಜೈನ್ ಲೀಯಾಸತ್ ಹುಸೇನ್ ಉಸ್ತಾದ್ ಗುಫ್ರಾನ್ ಮೊಹಮ್ಮದ್ ಗೌಸ್ ಸಹುಕಾರ ರಾಘವೇಂದ್ರ ಭಕ್ರಿ ಲಕ್ಷ್ಮಣ ಗುತ್ತೇದಾರ ಇತರರು ಉಪಸ್ಥಿತರಿದ್ದರು.