ಶಾಸಕ ರಾಜೂಗೌಡರ ತಂದೆ ಶಂಭನಗೌಡ ಪಾಟೀಲ್ ನಿಧನ

0
7

ಸುರಪುರ: ಕ್ಷೇತ್ರ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ನರಸಿಂಹನಾಯಕ (ರಾಜೂಗೌಡ) ಅವರ ತಂದೆ ಶಂಭನಗೌಡ ಪಾಟೀಲ್ ನಿಧನರಾದರು.ಅವರಿಗೆ ೭೮ ವರ್ಷ ವಯಸ್ಸಾಗಿತ್ತು.

ಶಂಭನಗೌಡ ಪಾಟೀಲ್ ಅವರು ಹಿಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿ ೨೦೦೪ರಲ್ಲಿ ನಿವೃತ್ತಿ ಹೊಂದಿದ್ದರು.ನಂತರದಲ್ಲಿ ಶಾಸಕರಾದ ನರಸಿಂಹ ನಾಯಕ ರಾಜುಗೌಡ ಅವರಿಗೆ ರಾಜಕೀಯ ಮಾರ್ಗದರ್ಶಕರಾಗಿದ್ದ ಅವರು,ರಾಜುಗೌಡ ಅವರು ರಾಜಕೀಯವಾಗಿ ಯಾವುದಾದರೂ ಮಹತ್ವವಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ತಂದೆ ಶಂಭನಗೌಡ ಹಾಗು ತಾಯಿ ತಿಮ್ಮಮ್ಮ ಗೌಡತಿಯವರಿಂದ ಸಲಹೆಯನ್ನು ಪಡೆದುಕೊಳ್ಳುತ್ತಿದ್ದರು.

Contact Your\'s Advertisement; 9902492681

ಕಳೆದ ಎರಡು ವರ್ಷಗಳಿಂದ ಮೊಣಕಾಲು ನೋವಿನಸ ಸಮಸ್ಯೆ ಅನುಭವಿಸುತ್ತಿದ್ದರು.ಅಲ್ಲದೆ ಇತ್ತೀಚೆಗೆ ಅವರು ವಯೋ ಸಹಜ ಖಾಯಿಲೆಗಳಿಂದ ಹೆಚ್ಚು ಬಳಲಿದ್ದರು,ಅಲ್ಲದೆ ಕಳೆದ ಕೆಲ ದಿನಗಳ ಹಿಂದೆ ಕಲಬುರ್ಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಬಂದಿದ್ದರು.ಆದರೆ ಶನಿವಾರ ಸುರಪುರದ ಅವರ ನಿವಾಸದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಮದ್ಹ್ಯಾನ ೧ ಗಂಟೆಯ ವೇಳೆಗೆ ಈಹಲೋಕ ತ್ಯಜಿಸಿದ್ದಾರೆ.

ಮೃತರಿಗೆ ಶಾಸಕ ರಾಜುಗೌಡ ಹಾಗು ಮುಖಂಡ ಹಣಮಂತ ನಾಯಕ (ಬಬ್ಲುಗೌಡ) ಇಬ್ಬರು ಪುತ್ರರು ಹಾಗು ಇಬ್ಬರು ಪುತ್ರಿಯರಿದ್ದಾರೆ.ಮದ್ಹ್ಯಾನ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅನೇಕರು ಸುರಪುರ ನಗರದಲ್ಲಿನ ಅವರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನವನ್ನು ಪಡೆದರು.ನಂತರ ಸಂಜೆಯ ವೇಳೆಗೆ ಮೃತ ಶರೀರವನ್ನು ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದ್ದು ಇಂದು (ಭಾನುವಾರ) ಮದ್ಹ್ಯಾನ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿಸಲಾಗಿದೆ.

ಶಂಭನಗೌಡ ಅವರ ನಿಧನದ ಸುದ್ದಿ ತಿಳಿದು ಶನಿವಾರ ಸಂಜೆ ಸುರಪುರದಲ್ಲಿನ ನಿವಾಸಕ್ಕೆ ದೇವಪುರ ಜಡೇಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯರು, ಕಬಾಡಗೇರಾದ ನಿಷ್ಠಿ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು, ಸುರಪುರ ಸಂಸ್ಥಾನದ ಅರಸು ಮನೆತನದ ಡಾ. ರಾಜಾ ಕೃಷ್ಣಪ್ಪ ನಾಯಕ, ರಾಜಾ ಲಕ್ಷ್ಮೀನಾರಾಯಣ ನಾಯಕ, ಯಾದಗಿರಿ ಮಾಜಿ ಶಾಸಕರಾದ ಡಾ. ವೀರಬಸಂತರೆಡ್ಡಿ ಮುದ್ನಾಳ,ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಡಿವೈಎಸ್‌ಪಿ ಡಾ. ದೇವರಾಜ್ ಬಿ, ತಹಶೀಲ್ದಾರಾದ ಸುಬ್ಬಣ್ಣಜಮಖಂಡಿ,ಹುಣಸಗಿ ತಹಸೀಲ್ದಾರ್ ಅಶೋಕ ಸುರಪುರಕರ್, ಪ್ರಮುಖರಾದ ಡಾ. ಸುರೇಶ ಸಜ್ಜನ್, ಬಸವರಾಜ ಸ್ವಾಮಿ ಸ್ಥಾವರಮಠ, ಎಚ್.ಸಿ. ಪಾಟೀಲ್, ಯಲ್ಲಪ್ಪ ಕುರಕುಂದಿ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಗಣ್ಯರು, ಶಾಸಕರ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here