ಬಸವಕಲ್ಯಾಣ: ಕೃಷಿ, ಪರಿಸರ, ಪ್ರಾಕೃತಿಕ ಔಷಧಿ ಜ್ಞಾನ ಮೌಖೀಕ ಪರಂಪರೆಯಲ್ಲಿ ಉಳಿದು ಬಂದಿವೆ ಎಂದು ಅಧ್ಯಾಪಕ ರೇವಣಸಿದ್ದಪ್ಪ ದೊರೆ ಹೇಳಿದರು.
ಹುಲಸೂರ ತಾಲೂಕಿನ ಗಡಿಗೌಡಗಾವ್ ಗ್ರಾಮದ ಧೂಳಪ್ಪ ಭರಶೆಟ್ಟಿ ಅವರ ತೋಟದ ಮನೆಯಲ್ಲಿ ಎಳ್ಳ ಅಮಾವಾಸ್ಯೆ ಅಂಗವಾಗಿ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಾಹಿತ್ಯ ಮತ್ತು ಸಮಕಾಲಿನ ಸ್ಪಂದನೆ ಕುರಿತು ಅವರು ಮಾತನಾಡಿದರು. ಸಮಕಾಲಿನ ಬಿಕ್ಕಟ್ಟುಗಳಿಗೆ ಸಾಹಿತ್ಯ ಸೃಜನ ಮತ್ತು ವೈಚಾರಿಕ ನೆಲೆಯಲ್ಲಿ ಸ್ಪಂದಿಸಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಮಲ್ಲಿಕಾರ್ಜುನ ಧಬಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ದೀಪಕ ಪಾಟೀಲ, ಸಿಆರ್‌ಸಿ ನಾಗರಾಜ್ ಹಾವಣ್ಣ, ಧೂಳಪ್ಪ ಭರಮಶೆಟ್ಟಿ, ರಮೇಶ ತೋಟದ, ಶ್ರೀನಿವಾಸ ಉಮಾಪುರೆ, ಲಿಂಗರಾಜ ಜಡಗೆ, ಧಮೇಂದ್ರ ವಗ್ಗೆ, ಸೂರ್ಯಕಾಂತ ಪಸರಗೆ, ದತ್ತಾತ್ರೇಯ ರಾಘೋ, ಸತೀಶ ಹಿರೇಮಠ, ಬಸವರಾಜ ಬಿರಾದಾರ್, ಕಾಶಿನಾಥ ಬಿರಾದಾರ್ ಸೇರಿದಂತೆ ಮತ್ತಿತರರು ಇದ್ದರು. ಗಂಗಾಧರ ಸಾಲಿಮಠ ನಿರೂಪಿಸಿದರು. ಪ್ರಶಾಂತ ಬುಡಗೆ ಸ್ವಾಗತಿಸಿದರು. ಡಾ| ಭೀಮಾಶಂಕರ ಬಿರಾದಾರ್ ವಂದಿಸಿದರು.