ಅವರೆಕಾಯಿಗೆ ಹೆಚ್ಚಿದ ಬೇಡಿಕೆಯೂ..!

0
13

ಚನ್ನಗಿರಿ: ಪ್ರತಿವರ್ಷ ಚಳಿಗಾಲ ಬಂತೆಂದರೆ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ. ಈ ಸಮಯದಲ್ಲಿ ಮನೆಗಳಲ್ಲಿ ಸೊಪ್ಪು, ತರಕಾರಿಗಿಂತ ಅವರೆಕಾಯಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಬೇಡಿಕೆ ಹೆಚ್ಚಿದ್ದು, ಈ ಬಾರಿ ಅವರೆಕಾಯಿ ಬೆಲೆ ಕೆ.ಜಿ.ಗೆ ₹ 80 ಮುಟ್ಟಿದೆ.

ರೈತರು ಚಳಿಗಾಲದಲ್ಲಿ ಮೂರು ತಿಂಗಳು ಅವರೆಕಾಯಿಯನ್ನು ಹಿಂಗಾರು ಹಂಗಾಮಿನ ಬೆಳೆಯಾಗಿ ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ 550 ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಅವರೆಕಾಯಿಯನ್ನು ಬೆಳೆಯಲಾಗುತ್ತಿದೆ. ಚಳಿ ಹೆಚ್ಚಿದಂತೆಲ್ಲಾ ಅವರೆಕಾಯಿಯ ಸೊಗಡು 1 ಕಿ.ಮೀ. ದೂರದವರೆಗೂ ಪಸರಿಸುತ್ತದೆ.

Contact Your\'s Advertisement; 9902492681

ಸಾಮಾನ್ಯವಾಗಿ ಮನೆಗಳಲ್ಲಿ ಅವರೆಕಾಯಿಯನ್ನು ಬೇಯಿಸಿಕೊಂಡು ತಿನ್ನುತ್ತಾರೆ. ರೊಟ್ಟಿ, ಚಪಾತಿಗೆ ಅವರೆಕಾಯಿ ಪಲ್ಯವೇ ಆಗಬೇಕು. ಅಲ್ಲದೇ ಉಪ್ಪಿಟ್ಟು, ಚಿತ್ರಾನ್ನ, ಮಂಡಕ್ಕಿ ಉಸುಳಿಗೂ ಅವರೆಕಾಳನ್ನು ಬಳಸುತ್ತಾರೆ. ಅದರಲ್ಲೂ ಮುದ್ದೆ, ಅವರೆಕಾಯಿ ಸಾರನ್ನು ಜನರು ಬಾಯಿ ಚಪ್ಪರಿಸಿಕೊಂಡು ಸೇವಿಸುತ್ತಾರೆ. ಚಿಟ್ಟು ಅವರೆ ₹ 80ಕ್ಕೆ ಮಾರಾಟವಾಗುತ್ತಿದ್ದರೆ, ಜವಾರಿ ಅವರೆ ₹ 50ರಿಂದ ₹ 60 ಹಾಗೂ ಹೈಬ್ರಿಡ್ ಅವರೆ ₹ 50ಕ್ಕೆ ಅವರೆಕಾಯಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

‘ಚಳಿಗಾಲದಲ್ಲಿ ಅವರೆಕಾಯಿಯನ್ನು ಹೆಚ್ಚಾಗಿ ಬಳಸುವುದರಿಂದ ಬೆಲೆ ಹೆಚ್ಚಳವಾಗಿದೆ. ತಾಲ್ಲೂಕಿನಲ್ಲಿ ಬೆಳೆದಿರುವ ಅವರೆಕಾಯಿ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ರವಾನೆಯಾಗುತ್ತಿರುವುದೂ ದರ ಹೆಚ್ಚಳಕ್ಕೆ ಕಾರಣ. ಆದರೂ ತಂದು ತಿನ್ನುತ್ತಿದ್ದೇವೆ’ ಎನ್ನುತ್ತಾರೆ ಪಟ್ಟಣದ ರಾಕೇಶ್.

‘ರೈತರ ಹೊಲಗಳಿಗೆ ಹೋಗಿ ಅವರೆಕಾಯಿಯನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವೆ. ₹ 65ರಿಂದ ₹ 70ಕ್ಕೆ ಮಾರಾಟ ಮಾಡುತ್ತಿದ್ದಾರೆ. ಪಟ್ಟಣದ ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ₹ 80ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರೆಕಾಯಿ ಮಾರಾಟಗಾರ ರೇವಣಸಿದ್ದಪ್ಪ ತಿಳಿಸಿದರು.

ಅರ್ಧ ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಅವರೆಕಾಯಿ ಬಿತ್ತನೆ ಮಾಡಿದ್ದೆವು. ಈ ಬಾರಿ ಉತ್ತಮವಾಗಿ ಹಿಂಗಾರು ಮಳೆಯಾಗಿದ್ದರಿಂದ ಇಳುವರಿ ಕೂಡ ಉತ್ತಮ ವಾಗಿದೆ. ಮಾರಾಟಗಾರರು ಹೊಲಗಳಿಗೇ ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಇದುವರೆಗೆ 10 ಕ್ವಿಂಟಲ್ ಕಾಯಿ ಮಾರಾಟ ಮಾಡಲಾಗಿದೆ. 1 ಕ್ವಿಂಟಲ್ ಕಾಯಿಯನ್ನು ₹ 6,500ರಿಂದ ₹ 7 ಸಾವಿರಕ್ಕೆ ಮಾರಾಟ ಮಾಡಿದ್ದೇವೆ. ಅಂದಾಜು ₹ 65 ಸಾವಿರ ಆದಾಯ ಬಂದಿದೆ ಎಂದು ಅವರೆಕಾಯಿ ಬೆಳೆಗಾರ ಟಿ. ಹಳ್ಳಿ ಗ್ರಾಮದ ಸಿದ್ದಪ್ಪ ಸಂತಸ
ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here