ಕಲಬುರಗಿ: ಕಲಬುರಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ೨೦೧೯-೨೦ ನೇ ಸಾಲಿಗೆ ಸರ್ಟಿಫಿಕೇಟ್ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಎಸ್.ಎಲ್.ಎಲ್.ಸಿ. ಪಾಸಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿ.ಟಿ.ಟಿ.ಸಿ. ಪ್ರಾಂಶುಪಾಲರು ತಿಳಿಸಿದ್ದಾರೆ.
ತರಬೇತಿಯ ಅವಧಿಯು ೩ ವರ್ಷ ಇದ್ದು,. ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ನೀಡಲಾಗುತ್ತದೆ. ೨ ವರ್ಷದ ಅವಧಿಯ ಐ.ಟಿ.ಐ.ದಲ್ಲಿನ ಫಿಟ್ಟರ್, ಮಶಿನಿಷ್ಟ್, ಟರ್ನರ್ ವೃತ್ತಿಗಳಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಎರಡನೇ ವರ್ಷದ ಡಿಪೋಮಾ ಕೋರ್ಸ್‌ಗೆ ನೇರವಾಗಿ ಪ್ರವೇಶ ಪಡೆಯಲು ಅವಕಾಶ ಇರುತ್ತದೆ. ಇಚ್ಛೆಯುಳ್ಳ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಅದೇ ರೀತಿ ಪ್ರಸಕ್ತ 2019-20ನೇ ಸಾಲಿನ ವಿಶೇಷ ಘಟಕ ಮತ್ತು ಉಪಯೋಜನೆಯಡಿ ಹಾಗೂ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೊಜನೆಯಡಿ ಎಸ್.ಎಸ್.ಎಲ್.ಸಿ., ಐ.ಟಿ.ಐ., ಡಿಪ್ಲೋಮಾ, ಬಿ.ಇ. ಹಾಗೂ ಎಂ.ಟೆಕ್‌ನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ಅಲ್ಪಾವಧಿ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಎಲ್ಲಾ ಕೊರ್ಸುಗಳಿಗೆ ಅರ್ಜಿ ಸಲ್ಲಿಸಲು 2019ರ ಜುಲೈ 30 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ಕಲಬುರಗಿ ಸಂತ್ರಾಸವಾಡಿಯ ಜಿ.ಟಿ.ಟಿ.ಸಿ. ಕೇಂದ್ರಕ್ಕೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿ.ಟಿ.ಟಿ.ಸಿ. ಪ್ರಾಂಶುಪಾಲ ಮೋಹನ ರಾಠೋಡ್ ಕೊಣ್ಣೂರ ಇವರನ್ನು ಹಾಗೂ ಮೊಬೈಲ್ ಸಂಖ್ಯೆ 9449419143, 8453327166, 8453302396 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.