ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜಯಂತಿ

0
17

ಕಲಬುರಗಿ: ತಾಯಿ ಸಾವಿತ್ರಿಬಾಯಿ ಫುಲೆ ಅವರು ಆಧುನಿಕ ಭಾರತದ ಮೊದಲ ಶಿಕ್ಷಕಿ. ಜಾತಿ, ಧರ್ಮ, ವರ್ಗ, ಭೇದಭಾವ ಮಾಡದೇ ಸಮಾನ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿ ಅವರ ಆದರ್ಶ ಎಲ್ಲರಿಗೂ ಮಾದರಿ ಆಗಿವೆ. ಶಿಕ್ಷಕಿಯಾಗಿ ಸಾಕಷ್ಟು ಅವಮಾನಗಳನ್ನು ಮೆಟ್ಟಿ ನಿಂತವರು ಅಕ್ಷರದವ್ವ ತಾಯಿ ಸಾವಿತ್ರಿಬಾಯಿ ಫುಲೆ ಅವರಾಗಿದ್ದಾರೆ. ಅವರ ಜೀವನಗಾಥೆ ಇಂದಿನ ಶಿಕ್ಷಕರಿಗೆ ಸ್ಪೂರ್ತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಸೋಮವಾರ ಜರುಗಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮಹಿಳೆಗೆ ಪುರುಷ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಕಾರಣ ಅಂದು ಸಮಾನತೆಯ ಹಕ್ಕಿಗೆ ಕಾರಣವಾಗಿ ಕ್ರಾಂತಿಕಾರಿ ಮಹಿಳೆಯಾಗಿ ಹೊರಹೊಮ್ಮಿದ್ದ ತಾಯಿ ಸಾವಿತ್ರಿಬಾಯಿ ಫುಲೆ ಅವರ ಶ್ರಮವೇ ಮೂಲ ಕಾರಣವೆಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಪೂಜ್ಯ ಶ್ರೀ ಸಂಘಾನಂದ ಬಂತೇಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಪದಾದಿಕಾರಿಗಳಾದ ಶಿವರಾಜ ಅಂಡಗಿ, ಡಾ.ಶರಣರಾಜ್ ಛಪ್ಪರಬಂದಿ, ಪ್ರೊ.ಯಶವಂತರಾಯ ಅಷ್ಟಗಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ, ಗುಲಬರ್ಗ ವಿವಿ ವಿಶ್ರಾಂತ ಕುಲಸಚಿವ ಆರ್.ಎಸ್.ದೊಡ್ಮನಿ, ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಜಿಲ್ಲಾ ಮಹಿಳಾ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಲತಾ ರವಿ ರಾಠೋಡ, ಬಿಜೆಪಿ ಉತ್ತರ ವಲಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಪಾಟೀಲ, ಪ್ರಮುಖರಾದ ರಾಜುಗೌಡ ನಾಗನಳ್ಳಿ, ಮಚೇಂದ್ರನಾಥ ಮೂಲಗೆ, ಕಲ್ಯಾಣಕುಮಾರ ಶೀಲವಂತ, ಜಗದೀಶ ಮರಪಳ್ಳಿ, ಡಾ.ಕೇಶವ ಕಾಬಾ, ಪ್ರಭುಲಿಂಗ ಮೂಲಗೆ, ಮನೋಹರ ಪೊದ್ದಾರ, ಶಿವಾನಂದ ಮಠಪತಿ, ಸಂತೋಷ ಕುಡಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ಯಶ್ವಂತರಾಯ ಗರಡಶೆಟ್ಟಿ ಜಾವಳಿ, ರವಿ ಲಾತೂರಕರ್, ರೇವಣಸಿದ್ದಪ್ಪ ಜೀವಣಗಿ, ರಾಜೇಂದ್ರ ಮಾಡಬೂಳಕರ್, ಹೆಚ್.ಎಸ್.ಬರಗಾಲಿ, ವಿಶ್ವನಾಥ ತೊಟ್ನಳ್ಳಿ, ಸುನೀಲ ಹಡಪದ, ಸೈಯದ್ ಹಾಜೀ ಪೀರ್, ರವೀಂದ್ರಕುಮಾರ ಭಂಟನಳ್ಳಿ, ನೂರಜಹಾನ್ ಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here