ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರ ವಚನಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಸ್ಮಾರಕ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಕೊಡಮಾಡುವ ಪ್ರಶಸ್ತಿಗೆ ಅಫಜಲಪುರ ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸಣ್ಣ ಎಂ.ಗುಣಾರಿ, ಪ್ರಗತಿಪ್ರ ಚಿಂತಕ ಬಿ.ವಿ.ಚಕ್ರವರ್ತಿ, ಹಿರಿಯ ಹೋರಾಟಗಾರ ಶಿವಲಿಂಗಪ್ಪ ಕಿನ್ನೂರ, ಪ್ರಾದ್ಯಾಪಕ ಡಾ.ಬಾಬುರಾವ ಶೇರಿಕಾರ, ರಾಷ್ಟ್ರೀಯ ಬಸವ ದಳದ ಜಗದೇವಿ ಚೆಟ್ಟಿ, ವೈಚಾರಿಕ ಚಿಂತಕ ಶಶಿಕಾಂತ ಪಸಾರ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಮರೆಯಾಗುತ್ತಿದ್ದ ವಚನಗಳನ್ನು ಸಂರಕ್ಷಿಸಿ, ಅವುಗಳನ್ನು ರಕ್ಷಿಸಿ ಅದಕ್ಕೆ ಪುನರ್ಜನ್ಮ ಕೊಟ್ಟ ಕೀರ್ತಿ ಹಳಕಟ್ಟಿ ಶರಣರಿಗೆ ಸಲ್ಲುತ್ತದೆ. ಹಳಕಟ್ಟಿಯವರಿಂದಲೇ ಇಂದು ವಚನ ಸಾಹಿತ್ಯ ಬೆಳಕಿಗೆ ಬಂದಿದೆ.
ಅಂತಹ ಶ್ರೇಷ್ಠ ಶರಣನನ್ನು ಸ್ಮರಿಸುವ ಮತ್ತು ಇಂದಿನ ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಜುಲೈ 20 ರಂದು ಬೆಳಗ್ಗೆ 10.45 ಕ್ಕೆ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ಗೇಟ್ ಹಿಂಬದಿಯಲ್ಲಿರುವ ಎಕೆಆರ್ ದೇವಿ ಪಿಯು ಕಾಲೇಜಿನ ಆವರಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಬಸವಜ್ಞಾನ ಗುರುಕುಲದ ಪೂಜ್ಯ ಶ್ರೀ ಶರಣ ಡಾ.ಈಶ್ವರ ಮಂಟೂರ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ಸಾರೆ. ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಬಸವ ಸೇವಾ ಪ್ರತಿಷ್ಠಾನದ ಜಯಶ್ರೀ ಚಟ್ನಳ್ಳಿ, ಅಶೋಕ ನಗರ ಪೊಲೀಸ್ ಠಾಣೆಯ ಪಿಎಸೈ ವಾಹೀದ್ ಕೊತ್ವಾಲ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಕಾಡೆಮಿಯ ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ ತಿಳಿಸಿದ್ದಾರೆ.