ಸೇಡಂ: ಸೇಡಂ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ ಪೊಲೀಸ್ ಪೇದೆಯ ಮೇಲೆ ಅದೇ ಠಾಣೆಯ ಎಎಸ್ಪಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪೇದೆ ತಂದೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸೆಡಂ ಹಾಗೂ ಮಳಖೇಡ ಠಾಣೆಗಳಲ್ಲಿ ಆದ ಅಚಾತುರ್ಯ ಘಟನೆಗಳು ಆಂತರಿಕವಾಗಿದ್ದು, ಸಂಬಂಧಿಸಿದ ಪೊಲೀಸ್ ಅಧಿಕಾರಿ ಹಾಗೂ ಪೇದೆಗಳೊಂದಿಗೆ ಮಾತನಾಡಿ ಅವರಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಧ್ಯಮರೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ತಾಲ್ಲೂಕಿನ ಪೊಲೀಸ್ ಠಾಣೆಯ ಪೇದೆ ಗೋವಿಂದ ಚವ್ಹಾಣ ಮೇಲೆ ಕಳೆದ ರಾತ್ರಿ 4 ಗಂಟೆ ಸುಮಾರಿಗೆ ಠಾಣೆಯ ಎಎಸ್ಪಿ ಮತ್ತು ಕೆಲವು ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆಂದು ಗೋವಿಂದ ತನ್ನ ಸಾವಿಗೆ ಹಲ್ಲೆ ನಡೆಸಿದವರು ಕಾರಣ ಎಂದು ಪತ್ರ ಬರೆದು ಹೋಗಿದ್ದಾರೆಂದು ಪೇದೆಯ ತಂದೆ ಗೋಬ್ರಾನಾಯಕ ಅವರು ಇಲಾಖೆಗೆ ದೂರು ನೀಡಿ ತನ್ನ ಮಗನನ್ನು ಹುಡುಕಿ ಕೊಡಿ ಮತ್ತು ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೇ ರೀತಿಯ ಪ್ರಕರಣ ಕಲಬುರಗಿ ಜಿಲ್ಲೆಯ ಮಳಖೇಡ ಪೊಲೀಸ್ ಠಾಣೆಯ ಸಂಭವಿಸಿದೆ ಎನ್ನಲಾಗುತ್ತಿದ್ದು, ಮಳಖೇಡ ಠಾಣೆಯ ಪೊಲೀಸ್ ಪೇದೆ ಚಂದ್ರು ಕೂಡ ನಾಪತೆಯಾಗಿದ್ದಾರೆ ಎಂದು ತಿಳಿದುಬಂದಿದೆ.