ಶಹಾಬಾದ:೧೨ನೆಯ ಶತಮಾನದಲ್ಲಿಯೇ ಅನುಭವಮಂಟಪದ ಮೂಲಕ ವಿಶ್ವದ ಪ್ರಥಮ ’ಸಂಸತ್’ ನಡೆಸಿ, ಸಮಾನತೆ, ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಅಣ್ಣ ಬಸವಣ್ಣನವರ ಪುತ್ಥಳಿ ನಿರ್ಮಾಣಗೊಳ್ಳುತ್ತಿರುವುದು ನಮಗೆಲ್ಲರಿಗೂ ಸಂತಸದ ಕ್ಷಣ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ನಗರಸಭೆಯಿಂದ ಎಸ್‌ಎಫ್‌ಸಿಯ ೪೫ ಲಕ್ಷ ಅನುದಾನದಲ್ಲಿ ಬಸವೇಶ್ವರ ಪುತ್ಥಳಿ ಶಂಕುಸ್ಥಾಪನೆ ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗುವ ಕಾಲ ಸನ್ನಿಹಿತವಾಗಿದೆ.ಈಗಾಗಲೇ ಬಹಳಷ್ಟು ತಡವಾಗಿದ್ದು, ಕೇವಲ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂಬರುವ ಬಸವ ಜಯಂತಿಯಂದು ಅನಾವರಣಗೊಳ್ಳಲಿದೆ ಎಂದರು. ಅಲ್ಲದೇ ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ಮಧ್ಯ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಸುವ ಕಾಮಗಾರಿಗೆ ೨೦ ಲಕ್ಷ ಹಾಗೂ ಬಸವೇಶ್ವರ ವೃತ್ತದಿಂದ ಕನಕದಾಸರ ವೃತ್ತದವರೆಗಿನ ಮಧ್ಯ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಸುವ ಕಾಮಗಾರಿಗೆ ೩೦ ಲಕ್ಷ ಅನುದಾನ ಒದಗಿಸಲಾಗಿದೆ.
ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ ಪುತ್ಥಳಿಯ ಮುಖ್ಯಧ್ವಾರ ಹಾಗೂ ಸೌಂದರೀಕರಣ ಮಾಡಲಾಗಿದೆ.ಮುಂಬರುವ ದಿನಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಅಭಿವೃದ್ಧಿಯ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಶಹಾಬಾದ ತಾಲೂಕನ್ನು ಮಾದರಿ ತಾಲೂಕಾವನ್ನಾಗಿ ಮಾಡುವ ಎಲ್ಲಾ ಕೆಲಸಗಳನ್ನು ತಮ್ಮೆಲ್ಲರ ಸಹಕಾರದಿಂದ ಮಾಡುತ್ತೆನೆ ಎಂದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ತಹಸೀಲ್ದಾರ ಸುರೇಶ ವರ್ಮಾ,ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ವಿಜಯಕುಮಾರ ಮುಟ್ಟತ್ತಿ,ಮೃತ್ಯುಂಜಯ್ ಹಿರೇಮಠ, ನಿಂಗಣ್ಣ ಹುಳಗೋಳಕರ್,ಅರುಣ ಪಟ್ಟಣಕರ್, ಅಣ್ಣಪ್ಪ ದಸ್ತಾಪೂರ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ಸೂರ್ಯಕಾಂತ ಕೋಬಾಳ, ನಾಗರಾಜ ಕರಣಿಕ್, ಶಿವುಗೌಡ ಪಾಟೀಲ, ಶಂಕರ ವಳಸಂಗ, ಮಹಾಂತೇಶ ಅವಂಟಿ, ಬಸವರಾಜ ಮದ್ರಿಕಿ,ಗಿರಿಮಲ್ಲಪ್ಪ ವಳಸಂಗ, ಭೀಮಯ್ಯ ಗುತ್ತೆದಾರ, ಸದಾನಂದ ಕುಂಬಾರ,ಶಿವಕುಮಾರ ನಾಟೇಕಾರ,ಡಾ.ಅಹ್ಮದ್ ಪಟೇಲ್,ಮಲ್ಲಿಕಾರ್ಜುನ ವಾಲಿ ಸೇರಿದಂತೆ ನಗರಸಭೆಯ ಸದಸ್ಯರು ಇತರರು ಇದ್ದರು.