ಸುರಪುರ: ನಗರದ ರಂಗಂಪೇಟೆಯ ಹಸನಾಪುರ ನಿವಾಸಿ ಶತಾಯುಷಿ ಭೀಮಣ್ಣ ದರ್ಶನಕರ್ ನಿಧನರಾಗಿದ್ದಾರೆ.ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು.ಕಳೆದ ೫ ದಶಕಗಳಿಗು ಹೆಚ್ಚು ಕಾಲದಿಂದ ಕಂಬಾರಿಕೆ ವೃತ್ತಿ ಮಾಡಿಕೊಂಡಿದ್ದರು.ತಾಲೂಕಿನ ಅನೇಕ ರೈತರ ಕೃಷಿಗೆ ಬೇಕಾಗುವ ಕಬ್ಬಿಣದ ಉಪಕರಣಗಳನ್ನು ಮಾಡಿಕೊಡುವ ಮೂಲಕ ರೈತರ ಒಡನಾಡಿಯಂತಿದ್ದರು.ರೈತರು ಅವರ ಕೆಲಸದಿಂದ ತುಂಬಾ ಗೌರವದಿಂದ ಕಾಣುತ್ತಿದ್ದ ಭೀಮಣ್ಣ ದರ್ಶನಕರ್ ಗುರುವಾರ ಬೆಳಿಗ್ಗೆ ನಿಧನರಾದರು.
ಅವರಿಗೆ ೩ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ೩೦ ಜನ ಮೊಮ್ಮಕಳಿದ್ದಾರೆ.ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುವ ಭೀಮಣ್ಣ ದರ್ಶನಕರ್ ನಿಧನಕ್ಕೆ ಅನೇಕ ಗಣ್ಯರು ಹಾಗು ರೈತ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.ಗುರುವಾರ ಸಂಜೆ ತಿಮ್ಮಾಪುರದ ಮಹಿಬೂಬ ಸುಭಾನಿ ಗುಡ್ಡದ ಬಳಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.