ಪ್ರೌಢ ಶಾಲೆಗೆ ಉಪನಿರ್ದೇಶಕರು ಭೇಟಿ

0
18

ಮಾಲೂರು: ಪ್ರತಿಯೊಬ್ಬ ವ್ಯಕ್ತಿಗೆ ಶಾಲಾ ಶಿಕ್ಷಣ ಬಹುಮುಖ್ಯ ಘಟ್ಟ. ಎಲ್ಲಾ ವ್ಯಕ್ತಿತ್ವ ರೂಪಿಸುವ ಬಹುಮುಖ್ಯ ಗುಣಗಳ ಅಳವಡಿಕೆ ಇಲ್ಲಿಂದಲೇ ಆಗುತ್ತದೆ. ಮಕ್ಕಳ  ಶೈಕ್ಷಣಿಕ ಚಟುವಟಿಕೆಗಳ ಯಶಸ್ಸು, ಪೋಷಕರು ಅವರಿಗೆ ಆಯ್ಕೆ ಮಾಡುವ ಶಾಲೆಯು ಒಂದು. ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಯಬೇಕಾದರೆ ಶಾಲೆಯ ವಾತಾವರಣವು ಉತ್ತಮವಾಗಿರಬೇಕು. ತೊರ‍್ನಹಳ್ಳಿ ಗ್ರಾಮದ ರಮಾ ಮಾಧವ ಪ್ರೌಢ ಶಾಲೆಯು ಉತ್ತಮ ಕಲಿಕಾ ವಾತಾವರಣ ಹೊಂದಿದ್ದು, ಉತ್ತಮ ಪ್ರತಿಭೆಯುಳ್ಳ ಮಕ್ಕಳಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕೋಲಾರದ ಉಪನಿರ್ದೇಶಕರಾದ ರೇವಣ ಸಿದ್ದಪ್ಪರವರು ಹೇಳಿದರು.

ಎಲ್ಲಾ ಪೋಷಕರು ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಲು ತಿಳಿಸಬೇಕು. ಸರ್ಕಾರದ ಮಾರ್ಗಸೂಚಿಗಳಿಗೆ ಅನುಸಾರವಾಗಿ ನಾವು ತರಗತಿಗಳನ್ನು ನಡೆಸುತ್ತಿದ್ದೇವೆ ಎಂದರು. ತೊರ‍್ನಹಳ್ಳಿಯ ರಮಾ ಮಾಧವ ಪ್ರೌಢ ಶಾಲೆಯಲ್ಲಿ ನುರಿತ ಸಿಬ್ಬಂದಿಗಳು ಇದ್ದು, ಶಾಲೆಯು ಕಾಂಪೌಂಡ್ ವ್ಯವಸ್ಥೆಯನ್ನು ಹೊಂದಿದ್ದು, ಶಾಲೆಯ ಪರಿಸರ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಎಲ್ಲಾ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಶಾಲೆಯಲ್ಲಿ ಪ್ರತಿಯೊಂದು ಮಗುವಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಲು ಈ ನೀರಿನ ಫಿಲ್ಟರ್ ವ್ಯವಸ್ಥೆ ಮಾಡಿರುವ ದಾನಿಗಳಿಗೆ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಮಾನ್ಯ ಉಪನಿರ್ದೇಶಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಪಿ.ಜಿ.ವಿದ್ಯಾಧರಿ, ಸಹಶಿಕ್ಷಕರಾದ ಶಿಎಚ್. ಕೃಷ್ಣಮೂರ್ತಿ, ಎಲ್. ವಿದ್ಯಾವತಿ, ಎಂ. ನಂಜುಂಡಪ್ಪ, ಜಿ.ಸಿ.ವೆಂಕಟಸ್ವಾಮಿ, ಎಂ.ಬಿ.ರಾಜಶೇಖರ್, ತಿಮ್ಮರಾಯಪ್ಪ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here