ನವದೆಹಲಿ: ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಸೇರಿದಂತೆ ಉತ್ತರಾಖಂಡ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಫೆ. 10ರಿಂದ ಮಾರ್ಚ್ 7ರವರೆಗೆ ಪಂಚರಾಜ್ಯ ಚುನಾವಣೆ ಚುನಾವಣೆಯನ್ನು ನಡೆಸಲು ಆಯೋಗ ಸಜ್ಜಾಗಿದೆ.
ಇಂದು ಮಧ್ಯಾಹ್ನ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಆತಂಕವಿರುವುದರಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಪಂಚ ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ಭಾಗವಹಿಸಲಿದ್ದಾರೆ. ಇದರಲ್ಲಿ 8.55 ಕೋಟಿ ಮಹಿಳಾ ಮತದಾರರಿದ್ದು, 24.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಏಳೂ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಗೋವಾ, ಪಂಜಾಬ್ ಹಾಗೂ ಮಣಿಪುರದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ನಡಯಲಿದೆ.
ಪಂಚ ರಾಜ್ಯ ಚುನಾವಣೆಯು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ದಿನಾಂಕ ವಿವಿರ ಹೀಗಿದೆ:
- ಮೊದಲ ಹಂತ: ಫೆಬ್ರವರಿ 10
- ಎರಡನೇ ಹಂತ: ಫೆಬ್ರವರಿ 14
- ಮೂರನೇ ಹಂತ: ಫೆಬ್ರವರಿ 20
- ನಾಲ್ಕನೇ ಹಂತ: ಫೆಬ್ರವರಿ 23
- ಐದನೇ ಹಂತ: ಫೆಬ್ರವರಿ 27
- ಆರನೇ ಹಂತ: ಮಾರ್ಚ್ 3
- ಏಳನೇ ಹಂತ: ಮಾರ್ಚ್ 7