ಭೀಮಾ ಕೋರೆಗಾಂವ ಯುದ್ಧ ಭಾರತೀಯರ ಶಕ್ತಿಯ ಪ್ರತೀಕ: ಮೆಂಗನ

0
6

ಶಹಾಬಾದ: ಕೋರೆಗಾಂವ ಯುದ್ಧ ಸಂಘಟನೆಯ ಶಕ್ತಿಯನ್ನು ವಿಶ್ವಕ್ಕೆ ಮತೊಂದು ಬಾರಿ ತೋರಿಸಿದ ಅಸಾಮಾನ್ಯ ಸಾಹಸ ಕಥೆಯಾಗಿದೆ. ಕೋರೆಗಾಂವ್ ಯುದ್ಧವನ್ನು ಮಾದರಿಯಾಗಿ ಇಟ್ಟುಕೊಂಡು ಯುವಕರು ಸಂಘಟಿತರಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ದಲಿತ ಮುಖಂಡ ಸುರೇಶ ಮೆಂಗನ ಹೇಳಿದರು.

ಅವರು ಭಂಕೂರ ಗ್ರಾಮದ ವೃತ್ತದ ಡಾ.ಬಿ.ಆರ್ ಅಂಬೇಡ್ಕರ್ ಮಾರ್ಗದಲ್ಲಿ ದಸಂಸ ಜಿಲ್ಲಾ ಶಾಖೆ ಹಾಗೂ ಅಂಬೇಡ್ಕರ್ ತರುಣ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನಾಚರಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಭಾವಚಿತ್ರಕ್ಕೆ ಮೇಣದ ದೀಪ ಅರ್ಪಿಸಿ ಮಾತನಾಡಿದರು.

Contact Your\'s Advertisement; 9902492681

ಅಂಬೇಡ್ಕರ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯುವಕರು ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಅಂಬೇಡ್ಕರ ಕೇವಲ ಸಂವಿಧಾನ ಶಿಲ್ಪಿಯಲ್ಲದೆ ಒಬ್ಬ ಇತಿಹಾಸಕಾರ, ಚಿಂತಕರಾಗಿದ್ದರು. ಕೋರೆಗಾಂವ್ ಘಟನೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲು ಮಾಡಿದ್ದು ಡಾ. ಅಂಬೇಡ್ಕರ ಎಂದರು.

ಕೋರೆಗಾವ ಯುದ್ಧ ಡಾ. ಬಾಬಾ ಸಾಹೇಬ್ ಅಂಬೇಡ್ಕರರಿಗೆ ದಲಿತ ಹೋರಾಟಕ್ಕೆ ಮುನ್ನುಡಿ ಬರೆಯಿತು. ವಿಶ್ವಕ್ಕೆ ಕೋರೆಗಾಂವ್ ಯುದ್ಧವನ್ನು ಪರಿಚಯಿಸಿದ ಇತಿಹಾಸಕಾರ ಡಾ. ಅಂಬೇಡ್ಕರ. ೧೮೧೮ ಜನೆವರಿ ೧ ಕೋರೆಗಾಂವ್ ಯುದ್ಧ ನಡೆದ ದಿನವಾಗಿದ್ದು ಭಾರತೀಯರು ಜ. ೧ ಸ್ವಾಭಿಮಾನಿ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶದಲ್ಲಿ ಇಂದಿಗೂ ಕೋರೆಗಾಂವ ಯುದ್ಧವನ್ನು ಸ್ವಾಭಿಮಾನದ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ ಮಾತನಾಡಿ, ಅಸಾಧ್ಯ ಕಾರ್ಯವನ್ನು ಸಂಘಟನೆಯಿಂದ ಸಾಧ್ಯ ಮಾಡಿ ತೋರಿಸಿದ ೧೮೧೮ರ ಭೀಮಾ ಕೋರೆಗಾಂವ್ ಯುದ್ಧ ವಿಶ್ವಕ್ಕೆ ದಲಿತ ಹಾಗೂ ಭಾರತೀಯರ ಶಕ್ತಿಯನ್ನು ತೋರಿಸಿಕೊಟ್ಟ ಮಹಾಯುದ್ಧವಾಗಿದೆ ಎಂದು ಹೇಳಿದರು. ಕೋರೆಗಾಂವ್ ಯುದ್ಧ ಪೇಶ್ವೆಯವರ ವಿರುದ್ಧ ಬ್ರಿಟೀ?ರ ಪರವಾಗಿ ಮಾಡಲಾಯಿತು.

ಬ್ರಿಟೀ?ರ ಪರವಾಗಿ ಮಾಡಿದ ಏಕೈಕ ಯುದ್ಧದ ವಿಜಯೋತ್ಸವ ಆಚರಣೆ ಇದಾಗಿದೆ. ಪೇಶ್ವೆಯುವರು ದಲಿತರಿಗೆ ಮಾಡಿದ ಅವಮಾನದಿಂದಾಗಿ ಸಿಡಿದ್ದೆದ್ದ ೮೦೦ ಸೈನಿಕರು ಪೇಶ್ವೆಯವರ ಬಲಿ? ೩೨,೦೦೦ ಸೈನಿಕರನ್ನು ಸೋಲಿಸಿ ಇತಿಹಾಸ ನಿರ್ಮಾಣ ಮಾಡಿದರು. ಇತಿಹಾಸದಲ್ಲಿ ಈ ಪ್ರಮಾಣದ ಸೈನ್ಯವನ್ನು ಸೋಲಿಸಿದ ದಾಖಲೆ ವಿಶ್ವದ ಯಾವುದೆ ದೇಶದ ಇತಿಹಾಸದಲ್ಲಿ ಕಂಡುಬರುವುದಿಲ್ಲ ಎಂದರು.

ಗ್ರಾಪಂ ಸದಸ್ಯ ಶರಣಬಸಪ್ಪ ಧನ್ನಾ,ಅಣ್ಣಪ್ಪ ಸರಡಗಿ,ನಾಗರಾಜ ಧನ್ನಾ, ತೇಜಸ್ ಧನ್ನಾ, ನಾಗೇಂದ್ರಪ್ಪ ಪಾಳಾ, ಅಂಬೇಡ್ಕರ್ ತರುಣ ಸಂಘ ಪದಾಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here