ಸ್ವಂತ ಹಣದಲ್ಲಿ ರಸ್ತೆ ದುರಸ್ತಿ: ಮಾದರಿಯಾದ ದೇವಾಪುರ ಗ್ರಾ.ಪಂ ಸದಸ್ಯೆ

0
23

ಸುರಪುರ: ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ತಮ್ಮ ಗ್ರಾಮದಲ್ಲಿನ ರಸ್ತೆ ಹದಗೆಟ್ಟಿದ್ದನ್ನು ಕಂಡು ತಮ್ಮ ಸ್ವಂತ ಹಣದಲ್ಲಿಯೇ ರಸ್ತೆಯನ್ನು ದುರಸ್ಥಿಗೊಳಿಸುವ ಮೂಲಕ ಇತರೆ ಗ್ರಾಮ ಪಂಚಾಯತಿ ಸದಸ್ಯರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ದೇವಾಪುರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯೆ ಸೂಗಮ್ಮ ಮಲಕಣ್ಣ ಆವಂಟಿಯವರು ರಸ್ತೆ ದುರಸ್ತಿಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸದಸ್ಯೆಯಾಗಿದ್ದಾರೆ.ಗ್ರಾಮದಲ್ಲಿನ ಬಸವೇಶ್ವರ ವೃತ್ತದಿಂದ ಗ್ರಾಮದೊಳಗಿನ ಗ್ರಾಮ ದೇವತೆ ದೇವಸ್ಥಾನಕ್ಕೆ ಹೋಗುವ ರಸ್ತೆ ಮತ್ತು ಗ್ರಾಮ ಪಂಚಾಯತಿ ಬಳಿಯಿಂದ ಗ್ರಾಮ ದೇವತೆ ದೇವಸ್ಥಾನಕ್ಕೆ ಹೋಗುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದವು.ಇದರಿಂದ ಗ್ರಾಮದ ಜನರು ಬೇಸತ್ತಿದ್ದರು ಅಲ್ಲದೆ ಈ ರಸ್ತೆಯಲ್ಲಿ ಹೋಗಲು ಹಿಡಿಶಾಪ ಹಾಕುವಂತಾಗಿದ್ದವು.ಇದರಿಂದ ಜನರು ಗ್ರಾಮ ಪಂಚಾಯತಿಯ ನಿರ್ಲಕ್ಯ್ಯಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದರು.ಇದರಿಂದಾಗಿ ಆ ರಸ್ತೆಯನ್ನು ಸದಸ್ಯೆ ಸೂಗಮ್ಮ ಮಲಕಣ್ಣ ಆವಂಟಿಯವರು ತಾವೇ ತಮ್ಮ ಸ್ವಂತ ಹಣದಲ್ಲಿ ದುರಸ್ತಿಗೊಳಿಸಲು ಮುಂದಾಗಿದ್ದಾರೆ.

Contact Your\'s Advertisement; 9902492681

ಶನಿವಾರ ಬೆಳಿಗ್ಗೆಯಿಂದ ಟ್ರ್ಯಾಕ್ಟರ್‌ಗಳ ಮೂಲಕ ಮುರiನ್ನು ತರಿಸಿ ನಂತರ ಅದನ್ನು ಜೆಸಿಬಿ ಯಂತ್ರದ ಮೂಲಕ ಸಮತಟ್ಟು ಮಾಡಿಸಿ ಸಂಜೆಯ ವೇಳೆಗೆ ಜನರ ಓಡಾಟಕ್ಕೆ ಉತ್ತಮವಾಗಿಸಿ ಕೊಟ್ಟಿದ್ದಾರೆ.ಇದರಿಂದ ಗ್ರಾಮದ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಜನರ ಅನುಕೂಲಕ್ಕಾಗಿ ಪಂಚಾಯತಿ ವತಿಯಿಂದ ದುರಸ್ತಿಗೊಳಿಸಲು ವಿಳಂಬ ಮಾಡಿದಾಗ ಸ್ವತಃ ತಾವೇ ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿಸುವ ಮೂಲಕ ಈಗ ಗ್ರಾಮದ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ.

ನಮ್ಮ ಶಾಸಕರಾದ ರಾಜುಗೌಡ ಅವರ ಬ್ಯಾನರ್ ಹಾಕಲಾಗಿತ್ತು ಅದೇ ಸ್ಥಳದಲ್ಲಿ ರಸ್ತೆ ತಗ್ಗು ಗುಂಡಿ ಬಿದ್ದು ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು.ಅಲ್ಲದೆ ಅನೇಕರು ಬೈಕ್ ಅಪಘಾತವಾಗಿ ಬಿದ್ದಿದ್ದರು.ಕಾರ್‌ಗಳು ಜಖಂ ಆಗಿ ತೊಂದರೆಅ ನುಭವಿಸಿದ್ದರು.ಆದ್ದರಿಂದ ಗ್ರಾಮ ಪಂಚಾಯತಿಯಿಂದ ಕೆಲಸ ಮಾಡಲು ವಿಳಂಬವಾಗಬಹುದೆಂದು ಮುರಮ್ ಹಾಕಿಸಲಾಗಿದೆ.ಸಿಸಿ ರಸ್ತೆಯನ್ನು ಮಾಡಿಸುವ ಯೋಚನೆ ಇದೆ. -ಸೂಗಮ್ಮ ಮಲಕಣ್ಣ ಆವಂಟಿ ಗ್ರಾ.ಪಂ ಸದಸ್ಯೆ ದೇವಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here