ಆಳಂದ ಪ್ರತಿಭಟನೆಗೂ, ಮೇಕೆದಾಟು ಪ್ರತಿಭಟನೆಗೂ ಸಾಮ್ಯತೆ ಬೇಡ

0
20

ಆಳಂದ: ಸೋಮವಾರ ನಡೆದ ಪ್ರತಿಭಟನೆ ಸ್ವಯಂಪ್ರೇರಿತವಾಗಿದ್ದು ಹಿಂದೂ ಸಮಾಜದ ನಾಗರಿಕ ಬಾಂಧವರು ತಮ್ಮ ಸಮಾಜದ ನಾಯಕರ ಭಾವನೆಗಳಿಗೆ ಧಕ್ಕೆ ಬಂದಾಗ ಪ್ರತಿಭಟನೆ ತೋರಿ ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ ತಾಲೂಕಾ ಅಧ್ಯಕ್ಷ ಗುಂಡು ಗೌಳಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ಪ್ರತಿಭಟನೆಗೂ, ಕಾಂಗ್ರೆಸ್ ಪಕ್ಷದ ಮೇಕೆದಾಟು ಪ್ರತಿಭಟನೆಗೂ ಹೋಲಿಕೆ ಮಾಡುತ್ತಿರುವುದು ಸರಿಯಲ್ಲ ಏಕೆಂದರೆ ಮೇಕೆದಾಟು ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಪಕ್ಷವಿದೆ ಆದರೆ, ಆಳಂದನಲ್ಲಿ ನಡೆದಿರುವ ಹೋರಾಟ ಬಿಜೆಪಿ ಪಕ್ಷದ ಹೋರಾಟವಲ್ಲ ಅದೊಂದು ತಾಲೂಕಿನ ಹಿಂದೂ ನಾಗರಿಕರ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಹಿಂದೂ ಧರ್ಮದವರನ್ನು ರೊಚ್ಚಿಗೆಳಿಸಿದೆ. ಜನರ ರೊಚ್ಚನ್ನು ಆರಿಸಲು ನಾವು ಕಾನೂನೂಬದ್ಧವಾಗಿ ಪ್ರತಿಭಟನೆಯ ಮಾರ್ಗ ಹಿಡಿದಿದ್ದೇವೆ. ಒಂದು ವೇಳೆ ಪ್ರತಿಭಟನೆ ನಡೆಯದೇ ಹೋಗಿದ್ದರೇ ಆಳಂದನಲ್ಲಿ ಕೋಮುಗಲಭೆಗಳಾಗುವ ಸಾಧ್ಯತೆ ಇತ್ತು ಅಲ್ಲದೇ ಪ್ರತಿಭಟನೆಗೂ, ಶಾಸಕರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕರೋನಾ ನಿಯಮ ಉಲ್ಲಂಘನೆ ಆಗಿರಬಹುದು ಇದರಿಂದ ನಾಲ್ಕಾರು ಜನ ಸೋಂಕಿತರಾಗಿ ಮತ್ತೆ ಗುಣಮುಖರಾಗಬಹುದಿತ್ತು ಆದರೆ, ಸಮಾಜದ ಶಾಂತಿ ಹಾಳಾಗಿ ಜನರ ಪ್ರಾಣ ಹೋಗಿದ್ದರೇ ಅದಕ್ಕೆ ಯಾರು ಹೊಣೆಯಾಗುತ್ತಿದ್ದೀರಿ? ಇದನ್ನು ತಪ್ಪಿಸುವ ಸಲುವಾಗಿಯೇ ನಾವು ಪ್ರತಿಭಟನೆಯ ಮಾರ್ಗ ಹಿಡಿದಿದ್ದೇವೆ ಎಂದು ತಿಳಿಸಿದ್ದಾರೆ.

ಆಳಂದ ದರ್ಗಾದಲ್ಲಿರುವ ಶಿವಲಿಂಗಕ್ಕೆ ಅಪಚಾರವಾಗಿರುವುದನ್ನು ಕಂಡು ಶಾಸಕರು ಸದನದಲ್ಲಿ ವಿಷಯ ಪ್ರಸ್ತಾಪಪಡಿಸಿದ್ದಾರೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲವು ಕಿಡಿಗೇಡಿಗಳು ಶಾಸಕರ ಫೋಟೊ ಮತ್ತು ವಿಡಿಯೋ ಇಟ್ಟುಕೊಂಡು ಅವಾಚ್ಯ ಶಬ್ದಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಇದು ಪ್ರತಿಯೊಬ್ಬ ಹಿಂದೂ ಖಂಡಿಸಬೇಕಾದ ವಿಷಯವಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here