ಸುರಪುರ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ

0
21

ಸುರಪುರ: ತಾಲೂಕು ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ:ರಾಗಪ್ರೀಯ ಆರ್ ಅವರು (ಮಂಗಳವಾರ) ದಿಢೀರನೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮೂರನೇ ಕೋವಿಡ್ ಅಲೆ ತಡೆಗಟ್ಟುವ ಬಗ್ಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕೋವಿಡ್ 3ನೇ ಅಲೆ ಮತ್ತು ಒಮೈಕ್ರಾನ್ ತಳಿ ವೈರಸ್ ತಡೆಗೆ ಸಂಬಂಧಿಸಿದಂತೆ ಸುರಪುರ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 100 ಎಲ್ಪಿಎಮ್( LPM) ಮತ್ತು 500 ಎಲ್ಪಿಎಮ್ ಜನರೇಷನ್ ಪ್ಲಾಂಟ್ (ಆಮ್ಲಜನಕ ಉತ್ಪಾದನ ಘಟಕ) , 100 ಬೆಡ್‌ಗಳುಳ್ಳ ಹಾಸಿಗೆ ಮತ್ತು 29 ವೆಂಟಿಲೇಟರ್ಸ್ ಮತ್ತು 150 ಆಕ್ಸಿಜನ್ ಸಿಲಿಂಡರ್ಸ್ಗಳ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸದ್ಯ ಕಾರ್ಯನಿರ್ವಹಿಸುತ್ತಿರುವ 100 ಎಲ್ಪಿಎಮ್( LPM) ಆಕ್ಸಿಜನ್ ಉತ್ಪಾದನ ಘಟಕ ಯಾವುದೇ ಅಡೆ-ತಡೆಗಳಿಲ್ಲದೇ ನಿರಂತರ ಕಾರ್ಯನಿರ್ವಸುತ್ತಿರುವುದನ್ನು ಪರಿಶೀಲಿಸಿದರು. ಸುರಪುರ ತಾಲೂಕು ಆಸ್ಪತ್ರೆಗೆ 500 ಎಲ್ಪಿಎಮ್ ಸಾಮರ್ಥ್ಯದ ಜನರೇಷನ್ ಪ್ಲಾಂಟ್ ಮಂಜೂರಾಗಿದ್ದು, ಇದಕ್ಕೆ ಸೂಕ್ತವಾದ ಶೆಡ್ ವ್ಯವಸ್ಥೆಯನ್ನು ನಿರ್ಮೀತಿ ಕೇಂದ್ರದ ಅಧಿಕಾರಿಗಳು ಮಾಡುತ್ತಿದ್ದಾರೆ . ಕಾಮಗಾರಿಯ ವೇಗವನ್ನು ಹೆಚ್ಚಿಸಿ ತ್ವರಿತವಾಗಿ ಮುಗಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಇನ್ನು ಮುಂದೆ ಆಸ್ಪತ್ರೆಯಲ್ಲಿ ನಮಗೆ ಆಕ್ಸಿಜನ್ ಸಮಸ್ಯೆ ಎದುರಾಗುವುದಿಲ್ಲ. ಇಲ್ಲಿಯೇ ಉತ್ಪಾದನೆಯಾಗಲಿದೆ‌. ಎಲ್ಲಾ ಬೆಡ್ ಗಳಿಗೆ ಆಕ್ಸಿಜನ್ ಸಪ್ಲೈ ವ್ಯವಸ್ಥೆಯನ್ನು ಮಾಡಲಾಗಿದೆ. 500 ಎಲ್ಪಿಎಮ್ ಜನರೇಷನ್ ಪ್ಲಾಂಟ್ ಸುಮಾರು 60 ಬೆಡ್ ಗಳಿಗೆ ಮತ್ತು 100 ಎಲ್ಪಿಎಮ್ ಜನರೇಷನ್ ಪ್ಲಾಂಟ್ 20 ಬೆಡ್ ಗಳಿಗೆ ಸಪ್ಲೈ ಆಗುತ್ತದೆ. ಒಂದುವೇಳೆ ಆಕ್ಸಿಜನ್ ಜನರೇಷನ್ ಪ್ಲಾಂಟ್ ನಲ್ಲಿ ಏನಾದರೂ ಸಮಸ್ಯೆಯಾದರೆ ಕ್ರೋಢೀಕರಿಸಿದ ಸಿಲಿಂಡರ್ಸಗಳನ್ನು ಬಳಕೆ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಸ್ಪತ್ರೆಯ ಪ್ರತಿ ವಾರ್ಡ್ ಗಳಿಗೆ ಭೇಟಿ ನೀಡಿ, ಆಕ್ಸಿಜನ್ ಸರಬರಾಜು, ಐಸುಲೇಷನ್ ಬೆಡ್ ಗಳ ವ್ಯವಸ್ಥೆ, ವೆಂಟಿಲೇಟರ್ಸ್, ಆಕ್ಸಿಜನ್ ಮತ್ತು ಜಂಬೋ ಸಿಲಿಂಡರ್ಸ್, ರೆಮಿಡಿಸಿಯರ್ ಮತ್ತು ಅಗತ್ಯ ಔಷಧಿ ದಾಸ್ತಾನು ಕುರಿತು ಪರಿಶೀಲಿಸಿದರು. ಆಸ್ಪತ್ರೆಯ ಪ್ರತಿಯೊಂದು ವಾರ್ಡ್ ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ, ಹೊರ ಮತ್ತು ಒಳ ರೋಗಿಗಳ ಹಿತರಕ್ಷಣೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಆರೋಗ್ಯಾಧಿಕಾರಿಗಳಿ ಸೂಚಿಸಿದರು.

ಈ ಸಂದರ್ಭದಲ್ಲಿ ಸುರಪುರ ತಾಲೂಕು ವೈದ್ಯಾಧಿಕಾರಿ ರಾಜಾ ವೆಂಕಪ್ಪ ನಾಯಕ, ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ನಿರ್ಮೀತಿ ಕೇಂದ್ರದ ಅಧಿಕಾರಿ ಕಿರಣಕುಮಾರ, ಇನ್ನಿತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here