ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಡಾ.ಅಂಬೇಡ್ಕರ್ ಭವನದಲ್ಲಿ ತಕ್ಷಶೀಲ ಬುದ್ಧ ವಿಹಾರ ಟ್ರಸ್ಟ್ ರಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿ ಸುರೇಶ ಮೆಂಗನ್, ಇಡೀ ಮಾನವಕುಲಕ್ಕೆ ಶಾಂತಿ ಸಂದೇಶ ನೀಡಿದ ಗೌತಮ ಬುದ್ಧ ವಿಶ್ವಕ್ಕೇ ಗುರು. ಮಹಾರಾಜನ ಮಗನಾಗಿ ಜನಸಿದ್ದರೂ ಸರ್ವಸ್ವವನ್ನೂ ತ್ಯಜಿಸಿ ಮಾನವ ಜನಾಂಗದ ಕ?ಗಳಿಗೆ ಪರಿಹಾರವನ್ನು ಹುಡುಕಿ ಹೊರಟ ಸಿದ್ಧಾರ್ಥ ಗೌತಮಬುದ್ಧನಾಗಿ ತನ್ನ ತಂದೆಗೇ ಗುರುವಾದನು. ಮನು?ನನ್ನು ಮನು?ರಾಗಿ ಕಾಣುವುದೇ ನಿಜವಾದ ಧರ್ಮ. ಪ್ರತಿ ಜೀವಿಯನ್ನು ಪ್ರೀತಿಯಿಂದ ಕಾಣುವ ಮೂಲಕ ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಸಂದೇಶವನ್ನು ನಾವೆಲ್ಲರೂ ಕೂಡಿಕೊಂಡು ಪಸರಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಇಂದು ಬೌದ್ಧಧರ್ಮವನ್ನು ಒಪ್ಪಿಕೊಂಡ ದೇಶಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ ಹಾಗೂ ಪ್ರಗತಿಯನ್ನು ಸಾಧಿಸಿವೆ. ಆದರೆ ಬೌದ್ಧ ಧರ್ಮ ಹುಟ್ಟಿದ ನಾಡಲ್ಲೇ ಅನಾಥವಾಗಿದೆ ಎಂದರು.ಆದ್ದರಿಂದ ಸಮಾಜವನ್ನು ಸರಿ ದಾರಿಗೆ ತರಬೇಕಾದರೆ ಬುದ್ಧನ ಮಾರ್ಗವನ್ನು ನಾವು ಅನುಸರಿಸಬೇಕು.ಅಲ್ಲದೇ ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸವ ಕೆಲಸ ನಮ್ಮೆಲ್ಲರ ಮುಖಾಂತರ ಆಗಬೇಕಾಗಿದೆ ಎಂದರು.
ತಕ್ಷಶೀಲ ಬುದ್ಧ ವಿಹಾರ ಟ್ರಸ್ಟ್‌ನ ನೂತನ ಪದಾಧಿಕಾರಿಗಳು: ನೂತನ ಅಧ್ಯಕ್ಷ- ಸುರೇಶ ಮೆಂಗನ್, ಗೌರಾವಾಧ್ಯಕ್ಷ-ಶರಣಬಸಪ್ಪ ಧನ್ನಾ, ಉಪಾಧ್ಯಕ್ಷ ಶಿವಯೋಗಿ ಬಣ್ಣಾಕಾರ ಹಾಗೂ ಶಾಮರಾವ ವಗ್ಗನ್, ಪ್ರಧಾನ ಕಾರ್ಯದರ್ಶಿ- ಭರತ್ ಧನ್ನಾ, ಕಾರ್ಯಾಧ್ಯಕ್ಷ-ಅಣ್ಣಪ್ಪ ಸರಡಗಿ, ಖಜಾಂಚಿ- ನಾಗೇಂದ್ರ ಪಾಳಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗರಾಜ ಧನ್ನಾ, ಪ್ರದೀಪ ಸರಡಗಿ, ತೇಜಸ್ ಧನ್ನಾ, ಶಿವಲಿಂಗಪ್ಪ ಗುಜ್ಜನ್,ತಿಪ್ಪಣ್ಣ ಸರಡಗಿ, ಮಲ್ಲಿಕಾರ್ಜುನ ಭಾವಿಮನಿ,ಸುಭಾಷ ದೇವನ, ಶಿವಕುಮಾರ ಯನಗುಂಟಿಕರ್,ಶ್ರಾವಣಕುಮಾರ ವಗ್ಗನ್, ಸೂರ್ಯಕಾಂತ ದೇವನ, ಭೀಮಾಶಂಕರ ಜಾನಾ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.