ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಆಗ್ರಹ

0
61

ಶಹಾಬಾದ: ಬೇಡ ಜಂಗಮರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಸರಕಾರ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಹೈದ್ರಬಾದ ಕರ್ನಾಟಕ ಬೇಡಜಂಗಮ ಸಮಾಜ ಸಂಸ್ಥೆ ವತಿಯಿಂದ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಹೈದ್ರಬಾದ ಕರ್ನಾಟಕ ಪ್ರದೇಶದಲ್ಲಿ ವಾಸಿಸುವ ಬೇಡ ಜಂಗಮರಿಗೆ ಸರಕಾರದ ನಿರ್ದೇಶನಗಳು ಹಾಗೂ ಸುತ್ತೋಲೆಗಳನ್ನು ಪರಿಗಣಿಸಿ ಬೇಡ ಜಂಗಮ ಜಾತಿ ಪ್ರಮಾಣ ನೀಡಬೇಕು.ಬೇಡ ಜಂಗಮರು ಯಾರ ಹಕ್ಕನ್ನೂ ಕಿತ್ತುಕೊಳ್ಳುತ್ತಿಲ್ಲ.ಆದರೆ ತಮಗೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಸ್ಥಿತಿ ಬಂದಿದೆ.ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳಲ್ಲಿ ಬೇಡ ಜಂಗಮ ಸಮಾಜವೂ ಒಂದು.

Contact Your\'s Advertisement; 9902492681

ಆದ್ದರಿಂದ ಕೇಂದ್ರ ಸರಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿ ಬೇಡ ಜಂಗಮ ಜಾತಿಯ ಬಗ್ಗೆ ನಮೂದಿಸಿದೆ.ಅಲ್ಲದೇ ಸೂರ್ಯನಾಥ ಕಾಮತ ವರದಿ ಮತ್ತು ಕೋರ್ಟ ಆದೇಶದಲ್ಲೂ ರಾಜ್ಯದ ವೀರಶೈವ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.ಆದರೂ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ.ಆದ್ದರಿಂದ ಜಂಗಮರೆಲ್ಲರೂ ಸಂಘಟನೆಯ ಮುಖಾಂತರ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದರು.ಕೂಡಲೇ ನಮಗೆ ನ್ಯಾಯುತವಾಗಿ ಸಿಗಬೇಕಾದ ಪ್ರಮಾಣ ಪತ್ರವನ್ನು ಸರಕಾರ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಮರುಳಾರಾಧ್ಯ ಕಳ್ಳಿಮಠ, ಗೌರಾವಾಧ್ಯಕ್ಷ ಮೃತ್ಯುಂಜಯ್ ಹಿರೇಮಠ,ನಗರಾಧ್ಯಕ್ಷ ಶಿವಕುಮಾರ ಹಿರೇಮಠ, ಉಪಾಧ್ಯಕ್ಷ ಶರಣಯ್ಯ ಹಿರೇಮಠ, ಕಾರ್ಯದರ್ಶಿ ಜಗದೀಶ ಮಠಪತಿ, ತಾಲೂಕಾ ಸಂಚಾಲಕ ಬಸಯ್ಯಸ್ವಾಮಿ ಮಠಪತಿ, ಮಲ್ಲಿಕಾರ್ಜುನ ತುಪ್ಪದ ಮಠ,ಶರಣಯ್ಯಸ್ವಾಮಿ ಮಠಪತಿ, ರಾವೂರ,ಬಸಯ್ಯಸ್ವಾಮಿ ನಂದಿಕೋಲ, ಸೋಮಶೇಖರಸ್ವಾಮಿ ಮಠಪತಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here