ಸುರಪುರ:ನಗರದ ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

0
23

ಸುರಪುರ: ನಗರದ ಅನೇಕ ಕಡೆಗಳಲ್ಲಿ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಶಾಖೆಯಿಂದ ವಿದ್ಯಾರ್ಥಿನಿಲಯದ ಮಹಿಳಾ ವಸತಿ ನಿಲಯದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ವಿದ್ಯಾರ್ಥಿನಿ ಪ್ರಮುಖ ಚಂದ್ರಕಲಾ,ತನುಶ್ರೀ,ಶೇಕಮ್ಮ,ಜೇಜಮ್ಮ,ರೇಣುಕಾ,ಅಕ್ಕನಾಗಮ್ಮ,ಯಲ್ಲಮ್ಮ,ಭಾಗ್ಯ,ಸುಜಾತಾ,ಭಾಗ್ಯ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಗಂಗೋತ್ರಿ ಮಹಾವಿದ್ಯಾಲಯ: ನಗರದ ಗಂಗೋತ್ರಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ ಆಚರಿಸಲಾಯಿತು.ಮೊದಲಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಜಗದೀಶ ತಂಬಾಕೆ,ಉಪನ್ಯಾಸಕ ವೆಂಕಟೇಶಗೌಡ ಪಾಟೀಲ್,ಕುಮಾರಗೌಡ ಪೊಲೀಸ್ ಪಾಟೀಲ್ ಮಾತನಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಶಿಕುಮಾರ ಬಿ.ಲಕ್ಕಿಮಾರ್,ಡಾ:ನಮೃತಾ ಜೈನ್,ವಿದ್ಯಾರ್ಥಿಗಳಾದ ಉಮೇಶ್,ಮೌನೇಶ್,ಹಣಮಂತ್ರಾಯ,ಪವನ್,ಮಲ್ಲಿಕಾರ್ಜುನ್,ಬಸವರಾಜ,ಶರಣಬಸವ,ಸುವರ್ಣಾ,ವೀಣಾ,ಶಿವಲೀಲಾ,ಕಲ್ಪನಾ,ತನು,ಸೇರಿದಂತೆ ಅನೇಕರಿದ್ದರು.

ಅರುಂಧತಿ ಪದವಿ ಮಹಾವಿದ್ಯಾಲಯ:ನಗರದ ಅರುಂಧತಿ ಪದವಿ ಮಹಾವಿದ್ಯಾಲಯ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ ಆಚರಿಸಲಾಯಿತು.ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಮಹಾವಿದ್ಯಾಲಯದಲ್ಲಿನ ೪೮ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಿಸುವ ಮೂಲಕ ವಿಶೇಷವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕೆ.ಎಲ್.ಚವ್ಹಾಣ,ಉಪನ್ಯಾಸಕರಾದ ವಿಜಯಕುಮಾರ ಬಣಗಾರ,ರಾಮಚಂದ್ರ ನಾಯಕ,ಸಿದ್ದಯ್ಯ ಸ್ಥಾವರಮಠ,ಶಾಂತಗೌಡ ಪಾಟೀಲ್,ಮಲ್ಲು ಬಾದ್ಯಾಪುರ,ಹಣಮಂತ್ರಾಯ ಭಜಂತ್ರಿ,ಶಿವಕುಮಾರ ಕುಂಬಾರ,ಜಾವಿದ್ ಹಾಗು ಉಪನ್ಯಾಸಕಿಯರಾದ ಸವಿತಾ ಆವಂಟಿ,ಯಂಕಮ್ಮ,ರೋಹಿಣಿ ಸೇರಿದಂತೆ ಅನೇಕರಿದ್ದರು.

ಸ್ವಾಮಿ ವಿವೇಕಾನಂದ ನಗರ: ನಗರದ ದೀವಳಗುಡ್ಡ ಬಳಿಯಲ್ಲಿನ ಸ್ವಾಮಿ ವಿವೇಕಾನಂದ ನಗರದಲ್ಲಿ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ ಆಚರಿಸಲಾಯಿತು.ಮೊದಲಿಗೆ ಸ್ವಾಮಿ ವಿವೇಕಾನಂದರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಕಲ್ಯಾಣಯ್ಯ ಸ್ವಾಮಿ,ವೆಂಕಟಪ್ಪ ನಾಯಕ,ಜಂಗಲಯ್ಯ ಗುತ್ತೇದಾರ್,ಶಿವರಾಜ ಸಗರ್,ಮಲ್ಲು ವಿಶ್ವಕರ್ಮ,ಶಿವರಾಜ ಖಾದಿ,ಶರಣು ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here