ಸೊಣ್ಣನಾಯಕನಹಳ್ಳಿ ಶಾಲೆಯಲ್ಲಿ, ಸಮವಸ್ತ್ರ, ನೋಟ್ ಪುಸ್ತಕ ವಿತರಣೆ

0
16

ಮಾಲೂರು: ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು   ಓದುವ ಹವ್ಯಾಸ ಬೆಳಸಬೇಕು, ಜೊತೆಗೆ ಉತ್ತಮ ಪ್ರಜೆಗಳನ್ನು ರೂಪಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಮಂಚಪನಹಳ್ಳಿ ಚಂದ್ರಪ್ಪ ರವರು ತಿಳಿಸಿದರು.

ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ಸೊಣ್ಣನಾಯಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಸಮವಸ್ತ್ರದ ಜೊತೆಗೆ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಸರ್ಕಾರಿ ಶಾಲೆಗಳಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದು, ಶಿಕ್ಷಕರು ಅವರಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ಹೊರತೆಗೆಯಬೇಕು ಎಂದು ದಾನಿಗಳಾದ ಮಂಚಪನಹಳ್ಳಿ ಚಂದ್ರಪ್ಪ ತಿಳಿಸಿದರು.

ನಮ್ಮ ಊರಿನ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದಂತಹ ದಾನಿಗಳಾದ ಚಂದ್ರಪ್ಪರವರ ಕಾರ್ಯ ಮೆಚ್ಚುವಂತಹದ್ದು ಎಲ್ಲರೂ  ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜಪ್ಪ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಚಂದ್ರಪ್ಪ, ನಾಗರಾಜಪ್ಪ, ಊರಿನ ಗ್ರಾಮಸ್ಥರಾದ ನಾರಾಯಣಸ್ವಾಮಿ, ಮಂಜುನಾಥ್, ಶಿಕ್ಷಕರಾದ ಮಣಿ, ಕವಿತ ಹಾಗೂ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here