ಚುನಾವಣಾ ಕಾರ್ಯದಲ್ಲಿ ನಿರತ ಸಿಬ್ಬಂದಿಗಳಿಗೆ ಅಂಚೆ ಮತ ಹಾಕಲು ಸೂಚನೆ

0
494

ಕಲಬುರಗಿ: ಲೋಕಸಭೆ ಸಾರ್ವತ್ರಿಕ ಚುನಾವಣಾ ಕರ್ತವ್ಯದ ಮೇಲಿರುವ ಪೊಲೀಸ್, ಕೆ.ಎಸ್.ಆರ್.ಪಿ., ಗೃಹರಕ್ಷಕ ದಳ, ಎನ್.ಇ.ಕೆ.ಆರ್.ಟಿ.ಸಿ. ಸಿಬ್ಬಂದಿಗಳು ಹಾಗೂ ಆಳಂದ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಲಾದ ಸಿಬ್ಬಂದಿಗಳು ಇದೇ ಏಪ್ರಿಲ್ ೧೫ ರಿಂದ ೧೭ರ ವರೆಗೆ ನಿಗದಿಪಡಿಸಿದ ಅಂಚೆ ಮತಪತ್ರ ಸೌಲಭ್ಯ ಕೇಂದ್ರದಲ್ಲಿ ತಮ್ಮ ಅಂಚೆ ಮತವನ್ನು ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಸೂಚನೆ ನೀಡಿದ್ದಾರೆ.


ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ತಮ್ಮ ಚುನಾವಣಾ ಗುರುತಿನ ಚೀಟಿ, ಚುನಾವಣಾ ಕರ್ತವ್ಯ ನೇಮಕಾತಿ ಆದೇಶದೊಂದಿಗೆ ಏಪ್ರಿಲ್ ೧೫ ರಿಂದ ೧೭ರ ವರೆಗೆ ಬೆಳಿಗ್ಗೆ ೯ ರಿಂದ ಸಾಯಂಕಾಲ ೫ ಗಂಟೆ ವರೆಗೆ ಅಂಚೆ ಮತಪತ್ರ ಸೌಲಭ್ಯ ಕೇಂದ್ರದಲ್ಲಿ ಮತ ಚಲಾಯಿಸಬೇಕು. ಇನ್ನು ಇದೂವರೆಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ (ಇಆಅ) ಪಡೆಯದವರು ಸದರಿ ಕೇಂದ್ರದಿಂದ ಕಡ್ಡಾಯವಾಗಿ ಇ.ಡಿ.ಸಿ ಪಡೆದು ಮತ ಚಲಾಯಿಸಲು ತಿಳಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಲಾಗಿರುವ ಅಂಚೆ ಮತಪತ್ರ ಸೌಲಭ್ಯ ಕೇಂದ್ರಗಳ ವಿವರ. ೩೪-ಅಫಜಲಪೂರ: ತಹಶೀಲ್ದಾರ ಕಚೇರಿ, ಅಫಜಲಪೂರ. ೩೫-ಜೇವರ್ಗಿ: ತಹಶೀಲ್ದಾರ ಕಚೇರಿ, ಜೇವರ್ಗಿ. ೪೦-ಚಿತ್ತಾಪುರ: ತಹಶೀಲ್ದಾರ ಕಚೇರಿ, ಚಿತ್ತಾಪುರ. ೪೧-ಸೇಡಂ: ಸಹಾಯಕ ಆಯುಕ್ತರ ಕಚೇರಿ, ಸ್ಟೇಷನ್ ರಸ್ತೆ ಸೇಡಂ. ೪೩-ಕಲಬುರಗಿ ಗ್ರಾಮೀಣ: ತಹಶೀಲ್ದಾರ ಕಚೇರಿ, ಕಲಬುರಗಿ. ೪೪-ಕಲಬುರಗಿ ದಕ್ಷಿಣ: ಮಹಾನಗರ ಪಾಲಿಕೆ ಕಟ್ಟಡ(ಹಳೆದು) ಕಲಬುರಗಿ. ೪೫-ಕಲಬುರಗಿ ಉತ್ತರ: ಮಹಾನಗರ ಪಾಲಿಕೆ ಕಟ್ಟಡ(ಹೊಸದು), ಜಗತ್ ವೃತ್ತ ಕಲಬುರಗಿ ಮತ್ತು ೩೯-ಗುರಮಿಟಕಲ್: ತಹಶೀಲ್ದಾರ ಕಚೇರಿ, ಯಾದಗಿರಿ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here