ಯುವಜನ ಸಬಲೀಕರಣ ಕ್ರೀಡಾ ಇಲಾಖೆಯಿಂದ ಬೇರ್ಪಡಿಸಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ

0
31

ಬೆಂಗಳೂರು: ಯುವ ಸಬಲೀಕರಣ ಇಲಾಖೆಯನ್ನು ಕ್ರೀಡಾ ಇಲಾಖೆಯಿಂದ ಪ್ರತ್ಯೇಕಗೊಳಿಸುವುದು ಸೇರಿದಂತೆ ಯುವಜನ ಸೇವೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಯುವ ಪ್ರಶಸ್ತಿ ಪುರಸ್ಕೃತರು ಶೀಘ್ರದಲ್ಲೇ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

‘ಯುವ ಸಮುದಾಯ ದೇಶದ ಬಹುದೊಡ್ಡ ಪ್ರಬಲ ಶಕ್ತಿ. ಹೀಗಾಗಿ ಇದನ್ನು ಕ್ರೀಡೆ ಜತೆಗೆ ಸೇರಿಸುವುದು ಸರಿಯಲ್ಲ. ಇದಕ್ಕೆ ಪ್ರತ್ಯೇಕ ಇಲಾಖೆ ರಚಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಯುವಜನ ಸೇವೆ ಪ್ರತ್ಯೇಕವಾಗಿ ಇದ್ದಾಗ ಮಾತ್ರ ಸೇವಾ ಮನೋಭಾವ ಬರಲು ಸಾಧ್ಯ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಡಾ. ಚಿನ್ನಪ್ಪ ವೈ. ಚಿಕ್ಕಹಾಡೆ ತಿಳಿಸಿದರು.

Contact Your\'s Advertisement; 9902492681

ಯುವಜನಕ್ಕೆ ಪ್ರತ್ಯೇಕ ಇಲಾಖೆಯನ್ನು ರಚಿಸಿ, ಈ ಮೂಲಕ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಮುಂದುವರಿಸಬೇಕು. ‘ನಮ್ಮೂರ ಶಾಲೆ, ನಮ್ಮೂರ ಯುವ ಜನರು ಯೋಜನೆ’ಯಡಿ ಈ  ಹಿಂದೆ ಇದ್ದಂತಹ ಯುವ  ಸಂಘಗಳಿಗೆ ಅನುದಾನ ನೀಡುವುದು, ಯುವ ಸಂಘಗಳ ನೋಂದಣಿ ಶುಲ್ಕ ಹಿಂದಿನಂತೆ ಪರಿಷ್ಕರಿಸುವುದು,  ತಾಲೂಕು ಹಂತಗಳಲ್ಲಿ ಯುವ ಜನ ಮೇಳಗಳನ್ನು ಮುಂದುವರೆಸಬೇಕು.
ರಾಜ್ಯ ಯುವ ಸಮ್ಮೇಳನ, ಯುವ ಸಂಪರ್ಕ ಸಭೆ, ಯುವ ವಿನಿಮಯ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಯುವ ಸಂಘಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸುವ ಬಗ್ಗೆ ಕರ್ನಾಟಕ ಯುವ ನೀತಿ 2021-2022ರ ನೀತಿಯಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಈಗ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜತೆಯಾಗಿರುವುದರಿಂದ ಕ್ರೀಡೆಗೆ ಆದ್ಯತೆ ನೀಡಲಾಗುತ್ತಿದ್ದು, ಯುವಜನ ಸಬಲೀಕರಣವನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಯುವಸಮೂಹ ಒಗ್ಗಟ್ಟಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.

ಕಂಠೀರವ ಕ್ರೀಡಾಂಗಣ ಸಿಂಗಪುರದ ಖಾಸಗಿಯವರ ಪಾಲಾಗಿರುವುದನ್ನು ತಪ್ಪಿಸಿ, ಮತ್ತೆ ರಾಜ್ಯದ ತೆಕ್ಕೆಗೆ ಬರಬೇಕು. ಕೇಂದ್ರ ಸರಕಾರಿ ಸ್ವಾಮ್ಯದಲ್ಲಿರುವ ನೆಹರು ಯುವ ಕೇಂದ್ರ ಸಂಘಟನೆಗೆ ಮತ್ತೆ ಅನುದಾನ ನೀಡಬೇಕು. ಬ್ಯಾಸ್ಕೆಟ್ ಬಾಲ್ ಗೆ ಹೆಸರಾಗಿದ್ದ ಜೆ.ಪಿ. ಸೆಂಟರ್ ಅನ್ನು ಮತ್ತೆ ಪುನಃಶ್ಚೇತನಗೊಳಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ಹುಚ್ಚು ಹೊಳೆಯಿಂದ ಯುವಜನ, ಸೇವಾ ಮತ್ತು ಕ್ರೀಡಾ ಇಲಾಖೆ ಮರೆಯಾಗುವುದರಲ್ಲೇ ಅನುಮಾನವೇ ಇಲ್ಲ. ನಾವು ಯಾವುದೇ ಸೌಲಭ್ಯಗಳನ್ನು ಕೇಳುತ್ತಿಲ್ಲ. ನಮ್ಮ ಸಲಹೆಗಳನ್ನು ಸ್ವಿಕರಿಸಿ ಎಂಬುದಷ್ಟೇ ನಮ್ಮ ಬೇಡಿಕೆ ಎಂದು ಸರಕಾರಕ್ಕೆ ಮನವಿ ಮಾಡಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕರಾದ ಎಚ್.ಜಿ. ಶೋಭಾ ಮಾತನಾಡಿ, ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್ ನೇತೃತ್ವದಲ್ಲಿ ಸರಕಾರಿ ಶಾಲಾ ಮಕ್ಕಳು  ಪ್ರವಾಸ ಇತ್ಯಾದಿಗಳನ್ನು ಮಾಡುವಂತಾಗಬೇಕು. ಕ್ರೀಡೆಯವರಿಗೆ ಪ್ರೋತ್ಸಾಹ ಕೊಡುವುದು ನಮ್ಮನ್ನು ಕಡೆಗಣಿಸುವುದು ತಪ್ಪು. ಇಲಾಖೆ ಉಳಿಯಬೇಕು. ಅಧಿಕಾರಿಗಳ ದರ್ಬಾರು ತಪ್ಪಬೇಕು. ಸಚಿವ ನಾರಾಯಣಗೌಡರು ಯುವಜನರ ಸ್ನೇಹಿಯಾಗಬೇಕು. ಇದಕ್ಕಾಗಿ ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಮತ್ತೊಬ್ಬ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ನಂದಿದುರ್ಗ ಬಾಲು ಗೌಡ ಮಾತನಾಡಿ, ಹೋಟೆಲ್ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ರಾಜ್ಯ ಯುವ ನೀತಿಯಲ್ಲಿ ಆದ್ಯತೆ ನೀಡಬೇಕು. ಯುವ ಸಬಲೀಕರಣ ಕ್ರೀಡಾ ಇಲಾಖೆಯಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಕ್ರೀಡೆ ಮತ್ತು ಯುವ ಜನ ಸಬಲೀಕರಣವನ್ನು ಬೇರ್ಪಡಿಸಬೇಕು.

ರಾಜ್ಯ ಯುವ ನೀತಿ ಸಲಹಾ‌ ಸಮಿತಿಗೆ ಸೂಕ್ತರನ್ನು ತೆಗೆದುಕೊಳ್ಳದಿರುವುದು ತುಂಬಾ ಅನ್ಯಾಯ ಮಾಡಿದಂತಾಗಿದೆ. ರಾಜಕೀಯ ಪ್ರೇರಿತವಾಗಿ ಯುವಜನರ ಬಗ್ಗೆ ಅರಿವು ಇಲ್ಲದವರನ್ನು ಸಮಿತಿಗೆ ಆಯ್ಕೆ ಮಾಡಿರುವುದು ಖಂಡನೀಯ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here