ಶಹಾಬಾದ: ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಸಂಕಟ ಎದುರಾಗುತ್ತದಾ ಎಂದು ಶಹಾಬಾದನಲ್ಲಿ ಇಂತಹದ್ದೊಂದು ಆತಂಕ ಶುರುವಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಎಸ್‌ಬಿಐ ಬ್ಯಾಂಕ್‌ನ ಸಿಬ್ಬಂದಿಗಳಿಗೆ ಹಾಗೂ ಕೆನರಾ ಬ್ಯಾಂಕಿನ ೪ ಸಿಬ್ಬಂದಿಗಳಿಗೆ ಹಾಗೂ ಇಬ್ಬರು ಪೊಲೀಸ್ ಪೆದೆಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.ಅಂದಿನಿಂದಲೇ ನಗರದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗುತ್ತಲಿದೆ ಎಂದು ತಿಳಿದಕೊಂಡು ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗೃತ ಕ್ರಮ ಕೈಗೊಳ್ಳಲು ದೌಡಾಯಿಸಿದ್ದರು.ಆದರೆ ಮತ್ತೆ ಕೆನರಾ ಬ್ಯಾಂಕಿನ ನಾಲ್ಕು ಜನ ಸೇರಿ ಮತ್ತೆ ಏಳು ಜನರಿಗೆ ಕೊರೊನಾ ದೃಢಪಟ್ಟಿದೆ. ಒಂದೇ ಬ್ಯಾಂಕಿನಲ್ಲಿ ಸುಮಾರು ೧೧ ಜನರಿಗೆ ಕೊರೊನಾ ದೃಢಪಟ್ಟಿದೆ.
ಅಲ್ಲದೇ ಬ್ಯಾಂಕಿಗೆ ಬಂದ ಹೋದ ಜನರಲ್ಲೂ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಮತ್ತೆ ನಾಲ್ಕು ಜನರಿಗೆ ಕೋರೊನಾ ಪಾಸಿಟಿವ್ ಆಗಿದೆ ಹೇಳಲಾಗುತ್ತಿದೆ. ಮಹಾಮಾರಿ ಕೊರೊನಾ ಆರ್ಭಟ ಉಲ್ಬಣಿಸುತ್ತಿದ್ದು, ನಗರದಲ್ಲಿ ಆತಂಕ ಹೆಚ್ಚುವಂತೆ ಮಾಡುತ್ತಿದೆ.
ಕಳೆದೊಂದು ವಾರದಿಂದ ಕೋವಿಡ್-೧೯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಪ್ರತಿಯೊಬ್ಬರಲ್ಲೂ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಕೆಲವು ದಿನಗಳ ಹಿಂದೆ ಒಂದಕ್ಕಿ ಇದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಇದೀಗ ಹೆಚ್ಚಾಗಿ ಸಾರ್ವಜನಿಕರ ಆತಂಕವನ್ನು ಇನ್ನ? ಹೆಚ್ಚಿಸಿದೆ. ನಗರದ ಕೆನಾರಾ ಬ್ಯಾಂಕಿನ ೧೧ ಜನ ಸಿಬ್ಬಂದಿಗಳಲ್ಲಿ ಕೊರೋನಾ ವೈರಸ್ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬ್ಯಾಂಕನ್ನು ಕಂಟೋನಮೈಂಟ್ ಜೋನ್ ಆಗಿ ಮಾಡಲಾಗಿದೆ. ಸೀಲ್‌ಡೌನ್ ಮಾಡಲಾಗಿದೆ.
ಡಿಸೆಂಬರ್ ೧೪ ರಿಂದ ೨೧ರವರೆಗೆ ಬ್ಯಾಂಕಿನ ವ್ಯವಹಾರಕ್ಕೆ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ವೈರಸ್ ಪ್ರಾರಂಭವಾದಾಗಿನಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬರದ ಹಿನ್ನೆಲೆ ಜನ ನಿರಾಯಾಸವಾಗಿ ಇದ್ದರು. ಆದರೆ ಕಳೆದೊಂದು ವಾರದಿಂದ ನಗರದಲ್ಲಿ ವೈರಸ್ ಲಗ್ಗೆ ಇಟ್ಟಿದೆ. ಪ್ರಾಥಮಿಕವಾಗಿ ಕೊರೋನಾ ವಾರಿಯರ್ಸ್‌ಗಳಿಗೆ ವೈರಸ್ ಕಂಡು ಬಂದಿರುವುದು ಜನಸಾಮಾನ್ಯರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೊರೊನಾ ಮೂರನೇ ಅಲೆ ಅಬ್ಬರಿಸುತ್ತಿದ್ದು ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮಗಳಿಗೆ ಹಲವಾರು ಕಸರತ್ತು ನಡೆಸುತ್ತಿದ್ದಾರೆ. ಆದರೂ ಶಹಾಬಾದ ನಗರದಲ್ಲಿ ಮಾತ್ರ ಇನ್ನಷ್ಟು ಹೆಚ್ಚಿನ ಆತಂಕ ಮೂಡಿಸಿದೆ.
ನಗರದಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದೆ.ಕೆನರಾ ಬ್ಯಾಂಕ್‌ವೊಂದಲ್ಲಿಯೇ ಸುಮಾರು ೧೧ ಜನರಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬ್ಯಾಂಕಿಗೆ ಬಂದ ಹಾಗೂ ಸಿಬ್ಬಂದಿಗಳ ಸಂಪರ್ಕಕ್ಕೆ ಒಳಗಾದ ಜನರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಆಗತಕ್ಕದ್ದು. ಒಂದು ವೇಳೆ ಏನಾದರೂ ನೆಗಡಿ, ಕೆಮ್ಮು, ಜ್ವರ, ಗಂಟಲು ಕೆರೆತ ಕಂಡು ಬಂದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.ಸಾರ್ವಜನಿಕರು ಕೊರೊನಾ ಹರಡದಂತೆ ಸರಕಾರದ ಆದೇಶವನ್ನು ಪಾಲಿಸಬೇಕು.ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಅನುಸರಿಸಿ.ಯಾವುದಕ್ಕೂ ನಿರ್ಲಕ್ಷ್ಯ ಮಾಡಬೇಡಿ. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.