ಡಾ.ಮಾತೆ ಬಸವಾಂಜಲಿದೇವಿ ಮಾತಾಜಿ

0
38

ಡಾ.ಮಾತೆ ಬಸವಾಂಜಲಿದೇವಿ ಮಾತಾಜಿ, ಪೀಠಾಧ್ಯಕ್ಷರು ಶ್ರೀ ಬಸವಜ್ಞಾನ ಮಂದಿರ ಮೈಸೂರು. ಇವರು ಹೇಳಿದ ಮೊದಲ ಬಸವಜ್ಞಾನದ ಪ್ರಚವನವೂ..! —

# ವಚನ, ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ? ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರ? ಅಪಾರ ಮಹಿಮ ಚೆನ್ನಮಲ್ಲಿಕಾರ್ಜುನ ನೆನ್ನೊಳಗಡಗಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದೆರೆದೆನು.

Contact Your\'s Advertisement; 9902492681

ಪಿಂಡದಲ್ಲಿ ಶಿವಗ್ನಾನ ಉದಯವಾಗಿ, ಆ ಜ್ಞಾನವೇ ದೃಕ್ಕಾಗಿ, ದೃಕ್ಕೇ ದೃಶ್ಯವಾಗಿ, ದೃಶ್ಯವೇ ಕಣ್ಣು ಕಾಣಿಕೆಯೆಂಬ ಭೇದವಿಲ್ಲದೆ, ತನ್ನ ಒಳಗೆ ಅಡಗಿ ಇರುವ,ಅಂತು ಪಾರ ಇಲ್ಲದ ಅಪಾರಮಹಿಮ ಚೆನ್ನಮಲ್ಲಿಕಾರ್ಜುನನನ್ನು ಚೆನ್ನಮಲ್ಲಿಕಾರ್ಜುನನ ಕಣ್ಣಿಂದ ಕಂಡು ಅಕ್ಕನ ಸುಜ್ಞಾನ ದೃಷ್ಟಿ ಕಂದೆರವಿಯಾತು ಹಾಲಿನೊಳಗೆ ತುಪ್ಪವು ಸಮವಾಗಿ ಇರುವುದು, ಅದು ಇದ್ಧು ತನ್ನ ಬೇರ್ಪಡಿಸಿ ತೋರುವುದು, ಅದರಂತೆಲೇಖಕದಲ್ಲಿ ಪರಮಾತ್ಮನು ಸಮರಸವಾಗಿ ಇದ್ದು, ತನ್ನ ನಿಜವ ಕಾಣಿಸಿ ತೋರದೆಇರುವುದು.

ಹಾಗೆ ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿ ಇದ್ಧು ಅದು ಪ್ರಕಾಶಿಸದೇ ಅಡಗಿ ಇರುವುದು, ಅದೇ ರೀತಿ ಜಗದ ಒಳಗೆ ಹೊರಗೆ ತುಂಬಿ ಅಖಂಡವಾಗಿ ಇದ್ದ ಪರಬ್ರಹ್ಮವ ಸಮ್ಯಗ್ ಜ್ಞಾನದೃಕ್ಕಿಂದ ಭಿನ್ನವಿರದೇ ನೋಡಿ ಕಾಣಲಾಗಿ ಶರಣ ತಾನೆಲ್ಲ ಪರಬ್ರಹ್ಮವೆಂಬುದು ತನಗೆ ಕಣ್ದೆರವಾಗಿ ತೋರುತ್ತಿರುತ್ತದೆ.

ಹಾಲಿನ ಮರೆಯಲ್ಲಿ ತುಪ್ಪವಿದೆ, ಸೂರ್ಯಕಾಂತದ ಮರೆಯಲ್ಲಿ ಅಗ್ನಿ ಇದೆ. ಪಿಂಡದ ಮರೆಯಲ್ಲಿ ದೇವರು ಇದ್ದಾನೆ. ಅಥವಾ ಆತ್ಮದ ಮರೆಯಲ್ಲಿ ಪರತತ್ವ ಪರಬ್ರಹ್ಮವಿದೆ. ಶಿವತತ್ವದಲ್ಲಿಯೇ ಸಹಜವಾಗಿ, ಸ್ವಯಂಭುವಾಗಿ ಇರುವ ಆ ಸಮ್ಯಕ್ ಜ್ಞಾನಾಗ್ನಿ ಶಿವನ ಸ್ವಾಯಂಜ್ಯೋತಿ, ಶಿವಜ್ಞಾನಾಗ್ನಿ, ಮೈದೋರುವುದು ಶಿವಕಾರುಣ್ಯ , ಸೂರ್ಯ ಕಾಂತ ಶಿಲೆಯಲ್ಲಿ ಬೆಂಕಿ ಅಂಕುರಿಸುವುದು ಸೂರ್ಯನ ಕಾರುಣ್ಯ, ಚಂದ್ರಕಾಂತದಲ್ಲಿ ನೀರು ಒಸರುವುದು ಚಂದ್ರನ ಪ್ರಸಾದ, ಗಿಡ, ಮರ, ಹಳ್ಳಿ ಚಿಗುರಿ ತಳಿರೇರುವುದು ವಸಂತದ ಅನುಗ್ರಹವಾಗಿದೆ.

ಹೀಗೆಯೇ ಶುದ್ದ ಆತ್ಮನಲ್ಲಿ ಶಿವಜ್ಞಾನವಂಕುರಿಸಿ ಶಿವತತ್ವದ ನಿಲುವು ಮಾನವನ ಅರಿವಿನ ಒಳಗಿಂದೇಳುವುದು ಪರಶಿವತತ್ವದ ಪರಮ ಕಾರುಣ್ಯ. ಮಾನವನ ಜೀವನದಲ್ಲಿ ಪ್ರಸಾದ ಚೈತ್ರ ಪ್ರಾಪ್ತವಾದರೇ ಪಿಂಡದಲ್ಲಿ ಶಿವತತ್ವ ವನಡಗಿಸಿಕೊಂಡಿರ್ದ ಆತ್ಮನ ಅಂತರಂಗದೊಳಗಣ ಶಿವತತ್ವವೇ ಜ್ಞಾನಾಂಕುರ ಸ್ವರೂಪವಾಗಿ… ಉದಯವಾಗುತ್ತದೆ. ಮಾನವನ ಅರಿವಿನ ಮರೆಯ ಈ ಶಿವಜ್ಞಾನ, ಈ ಜ್ಞಾನಪ್ರಕಾಶವೇ ತಾನಾಗಿ ಬೆಳಗುವ ಶಿವತತ್ವ ಮರೆಯನ್ನು ಭೇದಿಸಿ, ತಾನೇ ಪರಮನಲ್ಲಿ ಹೊಳೆವ ಬೆಳಕಾಗಬೇಕು.ಇದು ಮಾನವನ ಮುಖ್ಯ ಗುರಿಯಾಗಬೇಕು. ಅನ್ನುತ್ತಾರೆ ಮೈಸೂರಿನ ಶ್ರೀ ಬಸವಜ್ಞಾನ ಮಂದಿರದ ಡಾ.ಬಸವಾಜಲಿದೇವಿ ಅವರು.

ಇದು ಮೈಸೂರಿನ ಬಸವಜ್ಞಾನ ಮಂದಿರದ ಡಾ.ಬಸವಾಂಜಲಿದೇವಿಯವರ ಮೊದಲ ಪ್ರವಚನವೂ..!

  • # ಮೂಲ ಪ್ರವಚನಕಾರ್ತಿ — ಶ್ರೀ ಡಾ.ಬಸವಾಂಜಲಿದೇವಿ
  • # ನಿರೂಪಣೆ — ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here