ಶಹಾಬಾದ: ಸಿದ್ಧರಾಮೇಶ್ವರರು ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದ ಶರಣರು ನಾಡಿನ ಎಲ್ಲ ಸಮಾಜಕ್ಕೂ ಆದರ್ಶಪ್ರಾಯರು ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.
ಅವರು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಭೋವಿ ವಡ್ಡರ್ ಸಮಾಜ ಹಾಗೂ ಭೋವಿ ಯುವಕರ ಸಂಘ ವತಿಯಿಂದ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಹನ್ನೇರಡನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರು ಒಬ್ಬರು. ಸಿದ್ಧರಾಮೇಶ್ವರರು ಆ ಕಾಲದಲ್ಲಿಯೇ ಜೀವಿಗಳಿಗೆ ಬದುಕಲು ಕೆರೆಕುಂಟೆಗಳನ್ನು ಕಟ್ಟಿಸಿದ ಮಾನವೀಯತೆಯ ಹರಿಕಾರರು. ಅವರು ತಮ್ಮ ಜೀವನದಲ್ಲಿ ನುಡಿದಂತೆ ನಡೆದವರು.ಅವರ ಬದುಕಿದ ರೀತಿ ಹಾಗೂ ನುಡಿದ ಒಂದೊಂದು ಮಾತುಗಳು ನಮಗೆ ದಾರಿದೀಪವಾಗಲಿವೆ. ಅವರ ಒಂದೊಂದು ವಚನಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿದ್ದೇ ಆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ನಗರ ಪೊಲೀಸ್ ಠಾಣೆಯ ಪಿಐ ಸಂತೋಷ.ಡಿ.ಹಳ್ಳೂರ್ ಮಾತನಾಡಿ, ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಸಿದ್ಧರಾಮೇಶ್ವರರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಭೀಮಯ್ಯ ಗುತ್ತೆದಾರ, ಭೋವಿ ಸಮಾಜದ ತಾಲೂಕಾ ಅಧ್ಯಕ್ಷ ಭೀಮರಾವ ಸಾಳುಂಕೆ, ಭಗವಾನ ದಂಡಗುಲಕರ್,ತಿಪ್ಪಣ್ಣ ನಾಟೇಕಾರ,ಶಂಕರ ದಂಡಗುಲಕರ್, ಕನಕಪ್ಪ ದಂಡಗುಲಕರ್,ಯಲ್ಲಪ್ಪ ದಂಡಗುಲಕರ್,ರಾಮಸ್ವಾಮಿ ದೇವಕರ್, ಶಂಕರ ಕುಸಾಳೆ, ಬಾಬು ಪವಾರ, ಗಿರಿರಾಜ ಪವಾರ, ಶ್ರೀನಿವಾಸ ನೈದಲಗಿ, ಬಸವರಾಜ ದಂಡಗುಲಕರ್, ಮನೋಜ ಮೇಸ್ತ್ರಿ, ಬಾಬು ಮೇಸ್ತ್ರಿ,ಕುಶಾಲ ಮೇಸ್ತ್ರಿ, ಯಲ್ಲಾಲಿಂಗ ದಂಡಗುಲಕರ್,ದುರ್ಗಪ್ಪ ದಂಡಗುಲಕರ್, ಅಶೋಕ ದಂಡಗುಲಕರ್,ಶಾಮ ದಂಡಗುಲಕರ್,ವಿಶ್ವರಾಧ್ಯ, ವಿನೋದ,ಕಿರಣ,ಪರಶುರಾಮ ದಂಡಗುಲಕರ್,ಅನಿಲ ಪವಾರ,ಸುನೀಲ ಪವಾರ,ಸಂಜು ವಿಠಕರ್, ಸಿದ್ರಾಮ ಕುಸಾಳೆ,ರಾಮು ಕುಸಾಳೆ, ದಶರಥ ದೇಸಾಯಿ ಸೇರಿದಂತೆ ಅನೇಕ ಜನರು ಹಾಜರಿದ್ದರು.
ಇತರರು ಇದ್ದರು.