ಕಲಬುರಗಿ: ಇಲ್ಲಿಯ ಕಾಂತಾ ಕಾಲೋನಿಯಲ್ಲಿ ಇಂದು ಕಾಯಕಯೋಗಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ 2022ರ ದಿನ ದರ್ಶಿಕೆ(ಕ್ಯಾಲೆಂಡರ್) ಮತ್ತು ಕ್ರೀಡಾ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು.
ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಅವರು ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಇಂದು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಮುತುರ್ಜಿ ವಹಿಸಬೇಕು.ಮತ್ತು ಸರ್ಕಾರದ ಶೈಕ್ಷಣಿಕ ಯೋಜನೆಗಳನ್ನು ಸದುಪಯೋಗ ಮಾಡಿ ಕೊಳ್ಳುವಂತೆ ಹೇಳಿದರು.
ಕಾಂತಾ ಕಾಲೋನಿಯ ಮುಖಂಡರೂ ಆಗಿರುವ ನಿವೃತ್ತ ಮುಖ್ಯಗುರು ಗುರುಶಾಂತಪ್ಪ ಜೋಗನ ಅವರು ಅಧ್ಯಕ್ಷತೆ ವಹಿಸಿದರು. ಕಲಾವಿದರಾದ ಎಂ ಎನ್ ಸುಗಂಧಿ ರಾಜಾಪೂರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನೀಲಕಂಠಯ್ಯ ಹಿರೇಮಠ ಮಾತನಾಡಿದರು. ಕಾಯಕಯೋಗಿ ಸಂಸ್ಥೆಯ ಅಧ್ಯಕ್ಷ ಕೇದಾರನಾಥ ಕುಲಕರ್ಣಿ,ನಿಂಬರ್ಗಾ ಕಂದಾಯ ನಿರೀಕ್ಷಕ ಅನೀಲಕುಮಾರ ಬಬಲಾದ,ಪೀರಪ್ಪ ಬಂದರವಾಡ,ವಿಠ್ಠಲ ಅರ್ಜುಣಗಿ,ಶಿವಾಜಿ ಸೇರಿದಂತೆ ಮತ್ತಿತರರು ಭಾಗವಹಿಸಿದರು.
ಸಾಹಿತಿ,ಪತ್ರಕರ್ತ ಧರ್ಮಣ್ಣ ಎಚ್ ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ನವ್ಯ, ಅರ್ಪಿತಾ ಮತ್ತು ಲಕ್ಷ್ಮೀ ಅವರಿಂದ ಪ್ರಾರ್ಥನೆ ಗೀತೆ ಹಾಡಲಾಯಿತು. ನಂತರ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಡಾವಣೆಯ ಮಹಿಳೆಯರು, ಗಣ್ಯರು ಪಾಲ್ಗೊಂಡಿದರು.