ಸುರಪುರ: ಸರಳವಾಗಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

0
19

ಸುರಪುರ: ತಾಲೂಕು ಆಡಳಿತದಿಂದ ನಗರದ ತಹಸೀಲ್ ಕಚೇರಿಯಲ್ಲಿ ಸರಳವಾಗಿ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಆಚರಿಸಲಾಗಿದೆ.ಜಯಂತಿ ಅಂಗವಾಗಿ ಕಾರ್ಯಕ್ರಮದ ಆರಂಭದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.

ಈ ಸಂದರ್ಭದಲ್ಲಿ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ರವಿ ನಾಯಕ ಮಾತನಾಡಿ,೧೨ನೇ ಶತಮಾನದ ಬಸವಾದಿ ಶರಣರ ಸiಕಾಲಿನ ಶರಣರಾಗಿರುವ ಶಿವಯೋಗಿ ಸಿದ್ಧರಾಮೇಶ್ವರರು ಇಂದಿನ ಮಹಾರಾಷ್ಟ್ರದ ಸೊನ್ನಲಾಪುರದಲ್ಲಿ ಜನಸಿದ್ದರು.ಅವರು ಮೊದಲಿಗೆ ಹಸುಗಳನ್ನು ಕಾಯುತ್ತಿದ್ದರು,ತಾವು ಕಾಯಕದಲ್ಲಿ ತೊಡಗಿದ್ದಾಗ ಶ್ರೀಶೈಲ ಮಲ್ಲಿಕಾರ್ಜುನ ಪ್ರತ್ಯಕ್ಷನಾಗಿ ಅನ್ನ ಬೇಡಿದಾಗ ಮನೆಯಿಂದ ತರುವುದರೊಳಗೆ ಮಲ್ಲಿಕಾರ್ಜುನ ಮಾಯವಾಗಿದ್ದ ನಂತರ ಶ್ರೀಶೈಲಕ್ಕೆ ಹೋಗಿ ಸ್ವತಃ ಮಲ್ಲಿಕಾರ್ಜುನನಿಗೆ ಹಂಬಲಿ ಉಣಿಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.ಅಲ್ಲದೆ ಅಲ್ಲಮಪ್ರಭುಗಳೊಂದಿಗೆ ಕಲ್ಯಾಣಕ್ಕೆ ತೆರಳಿ ಬಸವಣ್ಣನವರ ಅನುಭವ ಮಂಟಪದಲ್ಲಿ ತೊಡಗಿ ವಚನಗಳನ್ನು ರಚಿಸಿದ ಮಹಾನ್ ಶರಣರಾಗಿದ್ದಾರೆ.ಅಂತಹ ಶರಣ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಸರಕಾರದಿಂದ ಇಂದು ನಾವೆಲ್ಲರು ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಶಿವಕುಮಾರ,ದ್ವತೀಯ ದರ್ಜೆ ಸಹಾಯಕ ಕಾರ್ತಿಕ,ಗ್ರಾಮ ಲೆಕ್ಕಾಧಿಕಾರಿ ಪ್ರದೀಪಕುಮಾರ ನಾಲ್ವಡೆ ಹಾಗು ಸಮಾಜದ ಮುಖಂಡರಾದ ನಾಗಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here