ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ನೀಡಲು ರೈತ ಸಂಘ ಮನವಿ

0
16

ಸುರಪುರ:ಮಾಲಗತ್ತಿ ಗೌಡಗೇರಿ ಭಾಗದ ರೈತರ ಜಮೀನುಗಳಿಗೆ ಹಗಲೊತ್ತಲ್ಲಿ ೩ ಪೇಸ್ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ನಗರದ ರಂಗಂಪೇಟೆಯಲ್ಲಿನ ಜೆಸ್ಕಾಂ ಇಲಾಖೆ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮುಖಂಡರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್ ಮಾತನಾಡಿ,ಆಂಜನೇಯ ಕ್ಯಾಂಪ್‌ಲ್ಲಿರುವ ಜೆಸ್ಕಾಂ ಸ್ಟೇಶನ್ ಮೂಲಕ ತಿಪ್ಪನಟಿಗಿ,ಮಾಲಗತ್ತಿ,ಆಂಜನೇಯ ಕ್ಯಾಂಪ್ ಮತ್ತು ಗೌಡಗೇರಾ ಭಾಗದ ರೈತರ ಜಮೀನುಗಳ ಪಂಪಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.ಇದುವರೆಗೆ ಪಂಪಸೆಟ್‌ಗಳಿಗೆ ೩ ಪೇಸ್ ವಿದ್ಯುತ್ ಹಗಲೊತ್ತಿನಲ್ಲಿ ಸರಬರಾಜು ಮಾಡಲಾಗುತ್ತಿತ್ತು.

Contact Your\'s Advertisement; 9902492681

ಆದರೆ ಈಗ ಸರಕಾರದ ಆದೇಶದ ಹೆಸರಲ್ಲಿ ರಾತ್ರಿ ೧೦ ಗಂಟೆಯಿಂದ ೩ಪೇಸ್ ನೀಡಲಾಗುತ್ತಿದೆ.ಆದರೆ ರಾತ್ರಿ ವೇಳೆ ನೀಡುವುದರಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ.ರಾತ್ರಿ ವೇಳೆಯಲ್ಲಿ ರೈತರು ಮೋಟರ್‌ಗಳಿಗೆ ನೀರು ಹಾಕಲು ಹೋಗುವುದಾಗಲಿ,ರಾತ್ರಿ ವೇಳೆ ನೀರು ಹಾಯಿಸುವುದಾಗಲಿ ಮಾಡುವಾಗ ಹಾವು ಚೇಳುಗಳಿಂದ ಅಪಾಯ ಎದುರಾಗಲಿದೆ.ಅಲ್ಲದೆ ರಾತ್ರಿ ಇಡೀ ರೈತರು ವಿದ್ಯುತ್‌ಗಾಗಿ ಕಾಯಬೇಕಾಗಲಿದೆ.

ರಾತ್ರಿ ವೇಳೆ ವಿದ್ಯುತ್ ಹೋಗುವುದು ಬರುವುದು ಮಾಡಿದಲ್ಲಿ ರೈತರು ಪದೆ ಪದೆ ಮೋಟರ್ ಚಾಲು ಮಾಡಲು ಹೋಗುವುದು ಕಷ್ಟವಾಗಲಿದೆ.ಆದ್ದರಿಂದ ಈ ಹಿಂದಿನಂತೆ ಬೆಳಿಗ್ಗೆ ೫ ಗಂಟೆಯಿಂದ ೧೨ ಗಂಟೆಯ ವರೆಗೆ ಮತ್ತು ೧೨ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ವಿದ್ಯುತ್ ನೀಡಬೇಕು ಎಂದು ಮನವಿ ಮಾಡುತ್ತೇವೆ.ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಆಂಜನೇಯ ಕ್ಯಾಂಪ್,ತಿಪ್ಪನಟಿಗಿ,ಮಾಲಗತ್ತಿ,ಗೌಡಗೇರಾ ಭಾಗದ ರೈತರು ಪ್ರತಿಭಟನೆ ನಡೆಸಬೇಕಾಗಲಿದೆ ಎಂದು ಎಚ್ಚರಿಸಿ,ನಂತರ ಜೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ಕಚೇರಿ ಸಿಬ್ಬಂದಿಗಳ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಭೀಮೇಶರಡ್ಡಿ,ಮಲ್ಲಿಕಾರ್ಜುನ ಯನಗುಂಟಿ,ಸೋಪಣ್ಣ ಯನಗುಂಟಿ,ಶಿವಣ್ಣ ಸಜ್ಜನ್,ಶಿವಲಿಂಗಪ್ಪ ಹೊಸ್ಮನಿ,ಮುದಕಪ್ಪ ಕಂಬಾರ,ಶರಣಪ್ಪ,ಶಿವಮೂರ್ತೆಪ್ಪ ಸಾಹುಕಾರ,ಮಲ್ಲಪ್ಪ ಹೊಸಗೇರಿ,ಮತಾಬಲಿ ಮಕಂದಾರ,ಕಾಶಿಪತಿ ಕಂಬಾರ,ಮಲ್ಲಣ್ಣ ದಳಪತಿ,ಸಂಗಣ್ಣ,ವಿಜಯ ನಾಯಕ,ಆನಂದ,ಶರಣು,ರಮೇಶ,ಮುದಕಪ್ಪ ತೋಟ,ವೀರಭದ್ರಪ್ಪ ಸಾಸನೂರ,ನಂದರಡ್ಡಿ ಹಡಪದ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here