ಕರ್ಮಯೋಗಿ ಸಿದ್ಧರಾಮೇಶ್ವರರು ಸಮಾಜಕ್ಕೆ ಆದರ್ಶರು: ಸುರೇಶ ವರ್ಮಾ

0
15

ಶಹಾಬಾದ : ಶಿವಶರಣ ಶ್ರೇ?ರಲ್ಲಿ ಒಬ್ಬರಾಗಿದ್ದ ಸಿದ್ದರಾಮೇಶ್ವರರು ಕರ್ಮಯೋಗದಿಂದ ಪ್ರಸಿದ್ಧಿ ಪಡೆದ ಮಹಾಪುರು?ರಾಗಿದ್ದಾರೆ’ ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರರು ಸಮಾಜಕ್ಕೆ ಆದರ್ಶರು ಹಾಗೂ ಸಮಾಜ ಉದ್ಧಾರಕ್ಕೆ ಶ್ರಮಿಸಿದವರು ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ನಗರದ ತಹಸೀಲ್ದಾರ ಕಾಯಾಲಯದಲ್ಲಿ ಶನಿವಾರ ಆಯೋಜಿಸಲಾದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

೧೨ನೇ ಶತಮಾನದ ಶರಣರಲ್ಲಿ ಕಾಯಕ-ದಾಸೋಹ ಬೆಳೆದುಬಂದಿದ್ದು ಸಮಾಜಕ್ಕೆ ಆದರ್ಶವಾಗಿದೆ. ಸಿದ್ದರಾಮೇಶ್ವರ ಶರಣರು ಹಾಗೂ ಇತರ ಶರಣರು ಮಹಿಳೆಯರ, ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ ಜೊತೆಗೆ ಆಡಂಬರ ಜೀವನ ಮಾಡದೆ, ತಮ್ಮ ಕರ್ಮಯೋಗದ ಮೂಲಕ ೧೨ನೇ ಶತಮಾನದಲ್ಲಿ ಕೇಂದ್ರ ಬಿಂದುವಾಗಿದ್ದ ಸಿದ್ದರಾಮೇಶ್ವರರು ಸತ್ಯನಿ?ರಾಗಿದ್ದರು. ಕರ್ಮಯೋಗದಿಂದ ಶಿವಯೋಗಕ್ಕೆ ಏರಿದರು. ಸಮಾಜ ಸುಧಾರಣೆ ಸೇವೆಯಲ್ಲಿ ಬದುಕಿನ ಸಿದ್ಧಿ ಕಂಡುಕೊಂಡ ಅವರ ಜೀವನ ಸಾರ್ಥಕತೆಯಿಂದ ಕೂಡಿತ್ತು ಎಂದು ತಿಳಿಸಿದರು.

ಸಿದ್ದರಾಮೇಶ್ವರರ ಹೆಸರಿನಲ್ಲಿಯೇ ಒಂದು ಅದ್ಭುತ ಪವಾಡ ಅಡಗಿದೆ, ದೂರದೃಷ್ಟಿ ಹೊಂದಿರುವ ಅವರ ವಚನಗಳು ಇಂದಿಗೂ ಸಮಾಜದ ಕಣ್ಣು ತೆರೆಸುವಂತಿವೆ. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು, ಸಿದ್ದರಾಮೇಶ್ವರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಗ್ರೇಡ -೨ ತಹಶಿಲ್ದಾರ ಗುರುರಾಜ ಸಂಗಾವಿ, ಭೀವಿ ಸಮಾಜದ ತಾಲೂಕಾಧ್ಯಕ್ಷ ಭೀಮರಾವ ಸಾಳೂಂಕೆ,ಪ್ರ.ಕಾರ್ಯದರ್ಶಿ ದೇವದಾಸ ಜಾಧವ,ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕನಕಪ್ಪ ದಂಡಗುಲಕರ,ಸಿಬ್ಬಂದಿಗಳಾದ ಪರಿಮಳ ವಗ್ಗರ, ವಿಶಾಲಕುಮಾರ, ಕಮಲಾಬಾಯಿ, ರಾಮು ಕುಸಾಳೆ,ಶಂಕರ ಕುಸಾಳೆ, ಹಣಮಂತ ಪವರ,ಸಿದ್ರಾಮ ಕುಸಾಳೆ,ದುರ್ಗಣ್ಣ ಕುಸಾಳೆ,ನಗರಸಭೆ ಸದಸ್ಯರಾದ ಲಕ್ಷ್ಮಿಬಾಯಿ ಕುಸಾಳೆ, ಪಾರ್ವತಿ ಪವರ,ವಡ್ಡರ ಸಂಘ ಅಧ್ಯಕ್ಷರಾದ ಗೋವಿಂದ ಸ್ವಾಮಿ ಕುಸಾಳೆ,ಪ್ರ.ಕಾರ್ಯದರ್ಶಿ ಅಭಿ?ಕ ದೇವಕರ,ಸುರೆಶ ದಂಡಗುಲಕರ,ದಿನೇಶ ಕುಸಾಳೆ,ಅಮ್ಮು ಮಾನೆ,ಪ್ರಸನ್ನ ಕುರ್ಡೆಕರ,ಬಾಬ ಬಾತ್ಕರ,ವೇಂಕಟೆಶ ದೋತ್ರೆ,ಗಣೇಶ ಮೈದರಗಿ, ಅಜಯ, ಹಣಮಂತ, ಲಕ್ಷ್ಮಣ, ರಾಹುಲ, ಪ್ರಭು, ನವಿನ, ದುರ್ಗಪ್ಪ, ವಿರೇಶ,ರೋಹಿತ,ಗೋವಿಂದ,ಬಲಭೀಮ,ಮಾರುತಿ,ಶಿವು,ದತ್ತು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here