ಶಹಾಬಾದ:ನಗರದ ಬಸವೇಶ್ವರ ವೃತ್ತದಲ್ಲಿರುವ ಹಳೆ ಪೊಲೀಸ್ ಠಾಣೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದರಿಂದ ನಗರಕ್ಕೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಇಶಾ ಪಂತ್ ಬೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಇಶಾ ಪಂತ್ ಬೇಟಿ ನೀಡುವ ಮುಂಚೆಯೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಲವು ವರ್ಷಗಳಿಂದ ಮುಚ್ಚಲ್ಪಟ್ಟ ಹಳೆ ಪೊಲೀಸ್ ಠಾಣೆಯನ್ನು ಕಾಂಇಕರ ಸಹಾಯದಿಂದ ಸ್ವಚ್ಛಗೊಳಿಸಿದ್ದರು.ಠಾಣೆಯ ಆವರಣದ ಸುತ್ತಲೂ ಬೆಳೆದು ನಿಂತಿರುವ ಮುಳ್ಳು ಕಂಟಿಗಳನ್ನು ಸಹ ತೆಗೆದು ಸಂಪೂರ್ಣ ಸ್ವಚ್ಚಗೊಳಿಸಿದ್ದರು.ಕಟ್ಟಡದೊಳಗೆ ಪ್ರವೇಶಿಸಿದ ಎಸ್‌ಪಿಯವರು ಕಟ್ಟಡದ ಕೋಣೆಗಳನ್ನು ವೀಕ್ಷಿಸಿದರು.ಅಲ್ಲದೇ ಕೋವಿಡ್ ಸೆಂಟರ ಆಗಿ ಪರಿವರ್ತಿಸಲು ಉತ್ತಮ ಕಟ್ಟಡವಾಗಿದೆ.ಈಗಾಗಲೇ ಮೂರನೇ ಅಲೆಯಲ್ಲಿ ಸಾಕಷ್ಟು ಪೊಲೀಸರಿಗೆ ಪಾಸಿಟಿವ್ ಕಂಡು ಬಂದಿದೆ.
ಇನ್ನು ಮುಂದೆ ಇಲಾಖೆಯ ಸಿಬ್ಬಂದಿಗಳಿಗೆ ಪಾಸಿಟಿವ್ ಕಂಡು ಬಂದರೆ ಇಲ್ಲಿಯೇ ಹೋಮ್ ಕ್ವಾರಂಟೈನ್ ಆಗಲು ವ್ಯವಸ್ಥೆ ಕಲ್ಪಿಸಿ. ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು.ಅಲ್ಲದೇ ಹಳೆ ಕಟ್ಟಡವನ್ನು ಸಂಪೂರ್ಣವಾಗಿ ಗುಡಿಸಿ, ಸ್ವಚ್ಛಗೊಳಿಸಿರುವುದಕ್ಕೆ ಶ್ಲಾಘಿಸಿದರು.ಅಲ್ಲದೇ ಶಹಾಬಾದ, ವಾಡಿ, ಚಿತ್ತಾಪೂರ, ಮಾಡಬೂಳ ಹಾಗೂ ಕಾಳಗಿ ವ್ಯಾಪ್ತಿಗೆ ಬರುವ ಪೊಲೀಸ್ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಇಲ್ಲಿನ ಕಟ್ಟಡ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದು ಸೂಕ್ತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ, ಪಿಐ ಸಂತೋಷ.ಡಿ.ಹಳ್ಳೂರ್, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹಾಗೂ ಪೊಲಿಸ್ ಸಿಬ್ಬಂದಿಗಳು ಇದ್ದರು.