ಕಲಬುರಗಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಕಾಶಿನಾಥ ಮೊತಕಪಲ್ಲಿ ಯವರಿಗೆ, ಕಲ್ಯಾಣ ಕರ್ನಾಟಕ ಭಾಗದಿಂದ ಅವಿರೋಧವಾಗಿ ನೇಮಕ ಗೊಂಡ ಎರಡನೇ ವ್ಯಕ್ತಿಯಾಗಿದ್ದಕ್ಕೆ ಹರ್ಷಗೊಂಡ ಈ ಭಾಗದ ಎಲ್ಲಾ ವಕೀಲರು ಇಂದು ರಂದು ಅವರ ಮನೆಗೆ ತೆರಳಿ ಅದ್ದೂರಿಯಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಕಲಬುರಗಿ ನ್ಯಾಯವಾದಿಗಳ ಸಂಘದ ಪರವಾಗಿ ಎಲ್ಲಾ ಪಧಾದಿಕಾರಿಗಳು, ಅಲ್ಲದೆ ಪ್ರತ್ಯೇಕವಾಗಿ ಕೂಡಾ ಭೇಟಿ ನೀಡಿ ಅನೇಕರು ಗೌರವಿಸುವ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯಗಳು ಕೋರಿದರು. ಮೊದಲಿಗೆ ಕಲಬುರಗಿ ಅಧ್ಯಕ್ಷರಾದ ರಾಜಕುಮಾರ ಕಡಗಂಚಿ ಕುಟುಂಬ ಸಮೇತ ಆಗಮಿಸಿ ಗೌರವಿಸುವ ಮೂಲಕ ಚಾಲನೆ ನೀಡಿದ ನಂತರ, ಜಿಲ್ಲಾ ಪಧಾದಿಕಾರಿಗಳು, ಬಿಜೆಪಿಯ ಕಾನೂನು ಪ್ರಕೋಷ್ಠದ ಪಧಾದಿಕಾರಿಗಳು, ಕೊನೆಯಲ್ಲಿ ಕಲ್ಯಾಣ ಕರ್ನಾಟಕ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿ ಅಲ್ಲದೆ ಬಂಧು ಬಳಗದವರು ಅಧಿಕ ಸಂಖ್ಯೆಯಲ್ಲಿ ತೆರಳಿ ಗೌರವಿಸಿದರು.
ಜಿಲ್ಲೆಯ ಅತಿ ಹಿಂದುಳಿದ ಚಿಂಚೋಳಿ ತಾಲೂಕಿನ ಕುಗ್ರಾಮದಿಂದ ಆಗಮಿಸಿದ ಮಧ್ಯಮ ಕುಟುಂಬದಲ್ಲಿ ಜನಿಸಿದ ಒಬ್ಬ ನ್ಯಾಯವಾದಿ, ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಂತರ ರಾಜ್ಯ ಪರಿಷತಿನ್ ಸಧ್ಯಸರಾಗಿ ಸೇವೆ ಸಲ್ಲಿಸಿ, ಈಗ ಅಧ್ಯಕ್ಷರಾಗಿ ಆಯ್ಕೆಗೊಂಡ ಎರಡನೇ ವ್ಯಕ್ತಿ, ದಿವಂಗತ ಎಸ್.ಎಸ್.ಕುಮ್ಮಣ್ಣ ಮೊದಲ ವ್ಯಕ್ತಿ, ಅವರು ಸತತ 15 ವರ್ಷಗಳ ಸುಧೀರ್ಘ ಸೇವೆಯ ನಂತರ ಆಯ್ಕೆಗೊಂಡಿದ್ದರು.