ಬೆಳಗಾವಿ: ಶಾಸಕರೇ ಮೇಯರ್ ಮತ್ತು ಉಪಮೇಯರ್ ಆಗಿದ್ದಾರೆ: ಸತೀಶ್ ಜಾರಕಿಹೊಳಿ ವ್ಯಂಗ್ಯ

0
9

ಬೆಳಗಾವಿ: ‘ಇಲ್ಲಿನ ಮಹಾನಗರಪಾಲಿಕೆಯಲ್ಲಿ ಅನಧಿಕೃತ ಮೇಯರ್- ಉಪ ಮೇಯರ್ ಇದಾರೆ. ಅನಧಿಕೃತವಾಗಿ ಅಧಿಕಾರ ನಡೆಸಲು ಸರ್ಕಾರವೇ ಅವಕಾಶ ನೀಡಿದೆ. ಕಾಂಗ್ರೆಸ್ ವತಿಯಿಂದ ಅವರಿಬ್ಬರಿಗೂ ಗೌನ್ ಕೊಡಲಾಗುವುದು. ಅವರೇ ಅಧಿಕಾರ ನಡೆಸಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರನ್ನು ಟೀಕಿಸಿದರು.

ಇಲ್ಲಿ ಮೇಯರ್‌ ಆಯ್ಕೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆ ಶಾಸಕರ ಕೈಯಲ್ಲಿ ಆಡಳಿತವಿದೆ. ಉಳಿದವರು ಟೀ-ಬಿಸ್ಕತ್ತುಗೆ ಸೀಮಿತವಾಗಿದ್ದಾರೆ’ ಎಂದು ಲೇವಡಿ ಮಾಡಿದರು.

Contact Your\'s Advertisement; 9902492681

‘ನಗರದಲ್ಲಿ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಆರಂಭದಿಂದ ರೈತರಿಗೆ ತೊಂದರೆ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಆದರೆ, ಆ ಮಾರುಕಟ್ಟೆ ಪರವಾಗಿ ಸರ್ಕಾರವೇ ನಿಂತಿದೆ. ಅದನ್ನು ಸರ್ಕಾರವೇ ತಡೆಗಟ್ಟಬೇಕು’ ಎಂದು ಒತ್ತಾಯಿಸಿದರು.

‘ಗೋವಾದಲ್ಲಿ ಚುನಾವಣಾ ಉಸ್ತುವರಿ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ನಮ್ಮ ‍ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಮಾಡಲು ತಯಾರಿ ನಡೆಸಿದ್ದೇವೆ. ನಾನು ಇಪ್ಪತ್ತು ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ನಡೆಸುತ್ತೇನೆ’ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಮುಖಂಡರಾದ ಎ.ಬಿ. ಪಾಟೀಲ, ಸುಶೀಲ ಬೆಳಗಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here