ಕಲಬುರಗಿ : ನಗರದ ಗಂಗಾನಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘದ ಆಶ್ರಯದಲ್ಲಿ ಜ .೨೧ ರಂದು ಅಂಬಿಗರ ಚೌಡಯ್ಯ ಜಯಂತಿಯನ್ನು ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಸಂಘ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷ ರಾಯಪ್ಪ ಹೊನಗುಂಟಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಕೂಡಿ, ಉಪಾಧ್ಯಕ್ಷ ದತ್ತು ಹುನಳ್ಳಿ, ಕಾರ್ಯದರ್ಶಿ ಮಲ್ಲು ಮರತೂರ, ಸಮಿತಿ ಸದಸ್ಯರಾದ ವಿಜಯಕುಮಾರ ಹದಗಲ್, ಅಶೋಕ ಹೇರೂರು, ಸೂರ್ಯಕಾಂತ ಚರಪಳ್ಳಿ, ಹಲವು ವರ್ಷಗಳಿಂದ ಜ .೨೧ ರಂದು ಜಯಂತಿ ಅದ್ಭುತವಾಗಿ ದೊಡ್ಡ ಮಟ್ಟದಲ್ಲಿ ಆಚರಿಸಲಾಗುತಿತ್ತು.
ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮ ಪಾಲನೆ ಮಾಡುವ ನಿಟ್ಟಿನಲ್ಲಿ ಅತ್ಯಂತ ಸರಳವಾಗಿ ಜಯಂತಿ ಆಚರಿಸಲು ಈಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.