ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಸೂರ್ಯ ನಗರ ಮತ್ತು ಜ್ಯೋತಿ ನಗರದ ಬಡಾವಣೆಗಳಲ್ಲಿ ಲೋಕೋಪಯೋಗಿ ಇಲಾಖೆ ೨೦೨೦-೨೧ ನೇ ಸಾಲಿನ ಕೆ.ಕೆ.ಆರ್ ಡಿ.ಬಿ. ಮೈಕ್ರೋ ಯೋಜನೆ ಅಡಿಯಲ್ಲಿ ೭೧ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನನ್ನ ಚುನಾವಣಾ ಸಂದರ್ಭದಲ್ಲಿ ನಿಮಗೆ ಮಾತು ಕೊಟ್ಟಂತೆ, ಈ ಭೂಮಿ ಪೂಜೆ ಕೆಲಸ ಮಾಡಿದ್ದೇನೆ. ಇನ್ನೂ ಸರ್ಕಾರದಿಂದ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ನೀರಿನ ಸಮಸ್ಯೆ ತಲೆದೂರಿದ್ದು, ಅದನ್ನು ಸಹ ಆದಷ್ಟು ಬೇಗ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.ಒಟ್ಟು ೧.೫೦ ಕೋಟಿ ಕಾಮಗಾರಿಗಳು ಇದ್ದು, ಆದಷ್ಟು ಬೇಗ ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವೀರಣ್ಣ ಹೋನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶೀಕಲಾ ಟೆಂಗಳಿ, ಎಇ ಮಂಜುನಾಥ, ವಿಶ್ವನಾಥ ಜಿವಣಗಿ, ಸಂಗಾವಿ, ಆರ್ ಎಸ್ ಪಾಟೀಲ, ವೀರಭದ್ರಯ್ಯ ಯದಹಳಿಮಠ, ಈಶ್ವರ ನಿಗುಡಗಿ, ರಾಜು ಆರ್ ಎಂಸಿ, ವಿನೋದ ಪಟೀಲ ಸರಡಗಿ, ಅಶೋಕ ಜೇವರ್ಗಿ ಸಾವು ಮರತೂರ, ಶಿವಲಿಂಗಪ್ಪ ಮಿಣಜಗಿ, ಕಾಶಿನಾಥ ನಂದೂರಕರ, ಈರಣ್ಣ ಪಾಟೀಲ ಇದ್ದರು.