ಶೈಕ್ಷಣಿಕ ಸಾಲ ಮನ್ನಾ ಮಾಡಲು ಒತ್ತಾಯಿಸಿ ಎಸ್ಎಫ್ಐ, ರೈತ ಸಂಘ ಮನವಿ

0
29

ರಾಯಚೂರು : ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲು, ನಿರುದ್ಯೋಗ ವಿದ್ಯಾವಂತ ಯುವಕರಿಗೆ ಭತ್ಯೆ ನೀಡಲು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರ್ನಾಟಕದಾದ್ಯಂತ ಅಲ್ಪಸಂಖ್ಯಾತ ಸಮುದಾಯ ಸೇರಿ ಇತರೆ ಸಮುದಾಯದ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಪಸಂಖ್ಯಾತರ ನಿಗಮ ಮತ್ತು ಸೇರಿ ಇತರೆ ನಿಗಮದಿಂದ, ಇಲಾಖೆಯಿಂದ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿ ಅಭ್ಯರ್ಥಿಗಳ ಮನೆ ಬಾಗಲಿಗೆ ನಿಗಮದ ಅಧಿಕಾರಿಗಳು ತೆರಳಿ ಒತ್ತಾಯ ಮಾಡುತ್ತಿದ್ದಾರೆ.

Contact Your\'s Advertisement; 9902492681

ವಸೂಲಾತಿಗೆ ನಮ್ಮ ವಿರೋಧವಿಲ್ಲ ಆದರೆ ಕೋವಿಡ್ ಬಂದ ನಂತರ ಲಕ್ಷಾಂತರ ವಿದ್ಯಾರ್ಥಿಗಳು ಈ ಕೊರನಾದಿಂದಾಗಿ ಕೆಲಸವನ್ನು ಕಳೆದುಕೊಂಡು ಉದ್ಯೊಗವಿಲ್ಲದೆ ಬೀದಿಗೆ ಬಂದಿದ್ದಾರೆ.

ಯಾವುದೇ ದುಡಿಮೆ ಮತ್ತು ಆದಾಯ ಇಲ್ಲದೆ ಹೊಟ್ಟೆ ತುಂಬಿಸಿಕೊಂಡು ಜೀವನವನ್ನು ಸಾಗಿಸಲು ಕಷ್ಟಪಡುತ್ತಿರುವ ಇಂತಹ ಸಂಕಷ್ಟದ ದಿನಗಳಲ್ಲಿ ನೆರವಿಗಾಗಿ ಭಾವಿಸಬೇಕಾದ ಸರ್ಕಾರವೆ ಇಂದು ಸಾಲ ವಸೂಲಿಗೆ ನಿಂತರೆ ಹೇಗೆ? ಇನ್ನೂ ಇದಕ್ಕೆ ಪುಷ್ಟಿ ನೀಡುವಂತೆ ರಾಯಚೂರಿನ ಅಲ್ಪಸಂಖ್ಯಾತರ ನಿಗಮದ ಅಧಿಕಾರಿಗಳು ಯಾವುದೇ ಆದೇಶ ತೋರಿಸಿದೆ, ನೋಟಿಸ್ ನೀಡದೆ ಏಕಾಏಕಿ ಮನೆ ಮನೆಗೆ ತೆರಳಿ ಪಡೆದ ಸಾಲವನ್ನು ಮರುಪಾವತಿಸಲು ಒತ್ತಡ ಹೇರುತ್ತಾ ಮಾನಸಿಕ ಕಿರುಕುಳವನ್ನು ನೀಡುತ್ತಾ ಅವಮಾನವನ್ನು ಮಾಡುತ್ತಿದ್ದಾರೆ.

ಕೂಡಲೆ ಇದನ್ನು ನಿಲ್ಲಸಬೇಕು ಮತ್ತು ಸಾಲ ಯಾರಿಂದಲೂ ಒತ್ತಾಯ ಪೂರ್ವಕವಾಗಿ ಸಾಲವನ್ನು ಕಟ್ಟಿಸಿಕೊಳ್ಳಬಾರದು, ಯುವಕರಿಗೆ ಸರ್ಕಾರದ ವತಿಯಿಂದ ನಿರುದ್ಯೋಗ ಭತ್ಯೆ ನೀಡಬೇಕು ಅಥವಾ ಉದ್ಯೋಗ ನೀಡಬೇಕು ಶಿಕ್ಷಣ ಮತ್ತು ಉದ್ಯೋಗ ನಮ್ಮ ಅದನ್ನು ನೀಡಬೇಕಾದುದ್ದು ಆಳುವ ಸರ್ಕಾರದ ಕರ್ತವ್ಯ ಎನ್ನುವುದನ್ನು ಮರೆಯಬಾರದು ಹಾಗೂ ಎಲ್ಲಾ ಹಂತದ ಶೈಕ್ಷಣಿಕ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ರೈತ ಸಂಘಟನೆಯ ಜಿಲ್ಲಾಧ್ಯಕ್ಷರಾದ ರೂಪ ಶ್ರೀನಿವಾಸ್ ನಾಯಕ, KPRS ಮುಖಂಡರಾದ ನರಸಣ್ಣ ನಾಯಕ ಜಾಲಹಳ್ಳಿ, ಶಬ್ಬೀರ್, ಭೀಮ್ ಆರ್ಮೀ ಸಂಘಟನೆಯ ಪ್ರವೀಣ್ ಕುಮಾರ್, ವಿಶ್ವನಾಥ ಬಲೀದ್ ಸೇರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here