ಕಲಬುರಗಿ: ಇಲ್ಲಿನ ಸುಮೇಧ ಪ್ರಕಾಶನದ ಸಂಚಾಲಕ, ಸಂಘಟಕ ದತ್ತಾತ್ರಯ ಇಕ್ಕಳಕಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.
ಹಿಂದಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕಾಶಿನಾಥ ಅಂಬಲಗಿ ಮಾರ್ಗದರ್ಶನದಲ್ಲಿ ‘ಉಪೇಂದ್ರನಾಥ ಅಷ್ಕ್ ಔರ್ ಉನ್ ಕಾ ಉಪನ್ಯಾಸ ಸಾಹಿತ್ಯ: ಏಕ್ ವಿಶ್ಲೇಷಣಾತ್ಮಕ್ ಅಧ್ಯಯನ’ ವಿಷಯ ಕುರಿತು ಹಿಂದಿ ವಿಭಾಗಕ್ಕೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಲಾಗಿದೆ ಎಂದು ಗುಲ್ಬರ್ಗ ವಿವಿ ರಿಜಿಸ್ಟ್ರಾರ್ (ಮೌಲ್ಯಮಾಪನ) ತಿಳಿಸಿದ್ದಾರೆ.