ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ: ಸಂಘಟಿತರಾಗಲು ಜಗನ್ನಾಥ ಸೂರ್ಯವಂಶಿ ಕರೆ

0
21

ಕಲಬುರಗಿ: ಅಸಂಘಟಿತ ವಲಯದ ಬೀದಿ ಬದಿ ವ್ಯಾಪಾರಿಗಳ ಆ ನಿಟ್ಟಿನಲ್ಲಿ ಸಂಘಟನೆಯ ಒಕ್ಕೂಟ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಸ್ಥಿತ್ವಕ್ಕೆ ಬಂದಿರುವುದು ಬೀದಿ ವ್ಯಾಪಾರಿಗಳಿಗೆ ಆನೆ ಬಲ ಬಂದಂತಾಗಿದೆ ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.

ನಗರದ ಸೂಪರ ಮಾರುಕಟ್ಟೆ ಕರ್ನಾಟಕ ರಾಜ್ಯ ಬೀದಿವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಎದುರಿಸುತ್ತೀರುವ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು
ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಂಗಸ್ವಾಮಿ ಅವರು ಸರ್ಕಾರಕ್ಕೆ ಸಲ್ಲಿಸಿ ಮನವರಿಕೆ ಮಾಡಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಒಕ್ಕೂಟದ ಸಂಘಟನೆಗಳು ರಾಜ್ಯಾದ್ಯಂತ ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಹಿತಕ್ಕಾಗಿ ಶ್ರಮಿಸುತ್ತಿವೆ ಎಂದರು.

ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಅಧ್ಯಕ್ಷರಾದ ಅರಬಿಂದಸಿಂಗ್ ಜಿ ಅವರು ಹಾಗೂ ಅಧಿಕಾರಿಗಳು ಕರ್ನಾಟಕದ ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಚಿಂತನಮಂಥನ ಕುರಿತು ವೀಡಿಯೊ ಕಾನ್ನರೆಷನ್ ಮೂಲಕ ಸಂಘಟನೆ ವಿವಿಧ ಘಟಕಗಳೊಂದಿಗೆ ಮಾತಾಡಿದ್ದಾರೆ . ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೀದಿ ಬದಿ ವ್ಯಾಪಾರಿಗಳ ವಿವಿಧ ಯೋಜನೆಗಳು ಹಾಗೂ ಅವುಗಳ ಅನುಷ್ಠಾನದ ಕುರಿತು ಮತ್ತು ರಾಜ್ಯದ ಪೊಲೀಸ್ ಇಲಾಖೆಯಿಂದ ಆಗುತ್ತೀರುವತೊಂದರೆ ಸರ್ಕಾರದಿಂದ ಪಟ್ಟಣ ವ್ಯಾಪಾರ ಸಮಿತಿ ಕುರಿತು ಮಾತನಾಡಿರುವ ಒಕ್ಕೂಟದ ನಾಯಕರು, ಸಂಘಟನೆಯನ್ನು ಬಲಪಡಿಸಿ ಬೀದಿವ್ಯಾಪಾರಿಗಳ ಕಲ್ಯಾಣಕ್ಕೆ ಶ್ರಮಿಸುವಂತೆ ಸೂಚಿಸಿದ್ದಾರೆ.

ಕೋವಿಡ ಮಹಾಮಾರಿಯ ಹಿನ್ನಲೆಯಲ್ಲಿ ಕೋರೋನಾ ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಯನ್ನು ಎಲ್ಲ ಬೀದಿಬದಿ ವ್ಯಾಪಾರಿಗಳು ಕಡ್ಡಾಯವಾಗಿ ಪಾಲಿಸಬೇಕು ಈ ಮೂಲಕ ತಮ್ಮ ಹಾಗೂ ಗ್ರಾಹಕರ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಡಾ.ವೇದಮೂರ್ತಿ, ಶಿವಪ್ಪ ಬಾಗೋಡಿ, ಹುಸೇನ, ಶಿವು ಮಡಕಿ, ರಾಘವೇಂದ್ರ ಕಾಮದಾಸಿ, ಗಾಯತ್ರಿ, ಲಕ್ಷ್ಮೀ ಬಾಬಜಿ, ರುಕ್ಕಿಣಿ, ದತ್ತು ಭಾಸಗಿ, ಬಾಬು ಶೇಖ ಪರಿಟ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here