ತೊರ‍್ನಹಳ್ಳಿ: ಸ್ಕೌಟ್ ಮತ್ತು ಗೈಡ್ ನಲ್ಲಿ ವಿದ್ಯಾರ್ಥಿಗಳು ಸ್ಕೌಟ್ ವಿಭಾಗದಲ್ಲಿ ಶಾಲೆಯ ಶ್ರೀ ಟಿ.ಎಂ.ವೆಂಕಟೇಶ್ ಸ್ಕೌಟ್ ಮಾಸ್ಟರ್ ನೇತೃತ್ವದಲ್ಲಿ ಪ್ರವೇಶ ಪರೀಕ್ಷೆಯಿಂದ, ಪ್ರಥಮ ಸೋಪಾನ, ದ್ವಿತೀಯ ಸೋಪಾನ, ತೃತೀಯ ಸೋಪಾನ ಪರೀಕ್ಷೆಗಳನ್ನು ಮುಗಿಸಿ, ರಾಜ್ಯಪುರಸ್ಕಾರ ಪ್ರಶಸ್ತಿಯನ್ನು, ಮಾನ್ಯ ರಾಜ್ಯಪಾಲರ ಸಹಿಯುಳ್ಳ ಪ್ರಮಾಣ ಪತ್ರವನ್ನು ಪಡೆದು ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮುಖ್ಯೊಪಾಧ್ಯಾಯರಾದ ಶ್ರೀಮತಿ ರಾಜೇಶ್ವರಿ ರವರು ತಿಳಿಸಿದರು.
ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೊರ‍್ನಹಳ್ಳಿಯಲ್ಲಿ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ ನಲ್ಲಿ ರಾಜ್ಯಪುರಸ್ಕಾರ ಪಡೆದ ಶಾಲೆಯ ವಿದ್ಯಾರ್ಥಿಗಳಾದ ಆರ್.ರಮೇಶ್, ಮನೋಹರ್ ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಸಿ.ವೆಂಕಟರಮಣಪ್ಪ, ತಿಮ್ಮರಾಯಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಮಾಂಜನೇಯ, ಶಿಕ್ಷಕರಾದ ಬಿ.ಎಂ.ಮುನಿರಾಜು, ಟಿ.ಎಂ. ವೆಂಕಟೇಶ್ (ಸ್ಕೌಟ್ ಮಾಸ್ಟರ್), ಭಾಗ್ಯವತಿ, ಶಿವಲಿಂಗಪ್ಪ, ದ್ರಾಕ್ಷಾಯಿಣಿ, ಶೈಲಜಾ, ಕಾವ್ಯಶ್ರೀ, ಗ್ರಾಮಸ್ಥರಾದ ಮುಜೀಜ್ ಹಾಗೂ ಇತರರು ಇದ್ದರು.