2ನೇ ಬಾರಿ ಸ್ವಾತಂತ್ರ್ಯ ಹೋರಾಟದ ಅಗತ್ಯ: ಎಸ್. ಆರ್ ಹಿರೇಮಠ

0
10

ಕಲಬುರಗಿ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಹಾಗೂ ಜಾನುವಾರು ಹತ್ಯೆ ಮೂರು ಕಾಯ್ದೆ ಕೂಡಲೆ ಹಿಂಪಡೆದುಕೊಳ್ಳಬೇಕು ಎಂದು ಜನಾಂದೋಲನಮಹಾ ಮೈತ್ರಿಯ ಮುಖಂಡ ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠ ಆಗ್ರಹಿಸಿದರು.

ಭಾನುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಂಡವಾಳಶಾಹಿಗಳ ಆಡಳಿತದಿಂದಾಗಿ ಬಡವರ್ಗದ ಜನರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇರವಾಗಿ ಉಳ್ಳವರ ಪರವಾಗಿ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ, ಇದರಿಂದಾಗಿ ರೈತರ, ಕಾರ್ಮಿಕರನ್ನು ಗುಲಾಮಿ ಪದ್ದತಿಗೆ ಕೊಂಡೊಯ್ಯತ್ತಿರುವುದಲ್ಲದೇ, ದೀನದಲಿತರ ಬಾಳಿಗೆ ಕೊಳ್ಳಿ ಇಡುತ್ತಿದ್ದಾರೆ ಎಂದ ಎಸ್.ಆರ್ ಹಿರೇಮಠ ಅವರು ಇದೀಗ ಎರಡನೇ ಬಾರಿ ಸ್ವಾತಂತ್ರ್ಯ ಹೋರಾಟ ಮಾಡುವ ಅಗತ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೇಂದ್ರದಲ್ಲಿ ಕೃಷಿಗೆ ಸಂಬಂಧಪಟ್ಟಂತಹ ಕಾನೂನುಗಳನ್ನು ಸುಗ್ರಿವಾಜ್ಞೆ ಮುಲಕ ಜಾರಿಗೆ ತಂದಿದ್ದರು. ಇದಕ್ಕೆ ಪ್ರತಿಯಾಗಿ ರೈತರ ನಿರಂತರ ವರ್ಷದ ಹೋರಾಟಕ್ಕೆ ಮಣಿದು ಸರ್ಕಾರ ಹಿಂಪಡೆದಿದೆ, ಆದರೆ ರಾಜ್ಯದಲ್ಲಿ ಈ ಪಕ್ರಿಯೆ ಮಾಡದೇ ಇರುವುದು ದುರಂತವಾಗಿದ್ದು, ಇದು ಕೇವಲ ಉಳ್ಳವರ ಪರವಾಗಿ ಸರ್ಕಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜವಾಬ್ದಾರಿ ಅರಿತು ಕೂಡಲೇ ಈ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.

ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವ ರೈತನ ಭೂಮಿಯನ್ನು ಕಸೀದುಕೊಂಡು ಉಳ್ಳವರ ಹಿತರಕ್ಷಣೆ ಮಾಡುತ್ತಿರುವುದು, ದೊಡ್ಡ ಅಪರಾಧವಾಗಿದೆ. ಈಗಾಗಲೇ ನಿರ್ಗತಿಕರ ಜಮೀನುಗಳನ್ನು ರಾಜ್ಯದ ರಾಜಕೀಯ ಮುಖಂಡರು ವಶಪಡಿಸಿಕೊಂಡು ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದಾರೆ. ಇದರಿಂದ ಡಿಕೆಶಿ, ಎಚ್.ಡಿ ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ಆರ್. ಅಶೋಕ ಸೇರಿದಂತೆ ಬಿಜೆಪಿ ಪಕ್ಷದ ಹಲವು ಮುಖಂಡರೂ ಸೇರಿ ನೂರಾರು ಭ್ರಷ್ಟ ಹಾಗೂ ಭೂ ಕಳ್ಳರು ರಾಜಕೀಯದಲ್ಲಿದ್ದಾರೆ. ಹೀಗಾಗಿ ಸರ್ಕಾರ ಅವರ ಪರ ನಿಲ್ಲುತ್ತಿದೆ ಎಂದೂ ಅವರು ಆರೋಪಿಸಿದರು.

ಎಪಿಎಂಸಿ ಕಾಯ್ದೆಯಿಂದಾಗಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಸರಬರಾಜಿಗಾಗಿ ಸಂಪೂರ್ಣ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ಮಾಡುತ್ತಿದೆ, ಅಲ್ಲದೇ ಜಾನುವಾರುಗಳ ಹತ್ಯೆ ನಿಷೇಧದಿಂದ ಸಣ್ಣ ರೈತರಿಗೆ ಭಾರೀ ಹೊಡೆತವಾಗಲಿದೆ ಎಂದರು.

ಸರ್ಕಾರ ಕೂಡಲೇ ಎಚ್ಚೆತ್ತು ಕಾಯ್ದೆಗಳನ್ನು ಹಿಂಪಡೆದುಕೊಂಡು, ನಾಡಿನ ರೈತರಿಗೆ ಬೇಕಾಗುವಂತಹ ಉತ್ಪನ್ನಗಳಿಗೆ ಸರಿಯಾದ ಬಂಬಲ ಬೆಲೆ, ನೀಡುವ ಕಾನೂನುಗಳು ರಚಿಸಿ ಅವರಪರವಾಗಿ ನಿಲ್ಲಲಿ ಎಂದು ಆಗ್ರಹಿಸಿದ ಅವರು, ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಫೆಬ್ರವರಿ ತಿಂಗಳಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣ ದಿಂದ ಚಾಮರಾಜನಗರದ ಮಲೇ ಮಹದೇಶ್ವರ ಬೆಟ್ಟದವರೆಗೆ ಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆರ್. ಕೆ ಹುಡಗಿ, ಅರ್ಜುನ ಭದ್ರೆ, ಸಿ. ಯತಿರಾಜ, ಖಾಜಾ ಅಸ್ಲಾಂ ಅಹ್ಮದ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here