ಕಲಬುರಗಿ: ಇಲ್ಲಿನ ಹಳೆ ಬ್ರಹ್ಮಪೂರನ ಚಂದ್ರಶೇಖರ್ ಆಜಾದ್ ಚೌಕ ನಲ್ಲಿ “ವೀರ ಪರಾಕ್ರಮ ದಿನ” ಆಚರಿಸಲಾಯಿತು.
125 ನೇ ಸುಭಾಶ್ಚಂದ್ರ ಭೋಶರ ಜಯಂತಿ ಅಂಗವಾಗಿ ಮಹಾನಗರಪಾಲಿಕೆಯ ನೂತನ ಸದ್ಯಸ ರಾಮು ರೆಡ್ಡಿ ಗುಮ್ಮಟ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ದೇಶದ ಯುವಕರಲ್ಲಿ ದೇಶ ಭಕ್ತಿ ಜಾಗೃತಿ ಉಂಟಾಗಲಿ ಎಂದು ಈ ದಿನ ವನ್ನು ವೀರ ಪರಾಕ್ರಮದಿನ ವೆಂದು ಆಚರಿಸುವ ನಿಟ್ಟಿನಲ್ಲಿ ಆದೇಶಹೊರಡಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಇಂದಿನದಿನವೇ ಪ್ರಾರಂಭಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ಕ.ವೈ.ಫ್ ನ ಜಿಲ್ಲಾ ಅಧ್ಯಕ್ಷ ಅನಂತ್ ಗುಡಿ ಭಾಗವಹಿಸಿ ಇಂದಿನ ಮಕ್ಕಳಿಗೆ ಮತ್ತು ಯುವಕರಿಗೆ ಇತಿಹಾಸ ತಿಳಿಸುವದು ಅತ್ಯಗತ್ಯ ವಾಗಿದೆ. ತ್ಯಾಗ ಮತ್ತು ಹೋರಾಟ ಎಂಬ ಶಬ್ದಗಳು ಅರಿತರೆ ಮಾತ್ರ ಅವರ ಕಾರ್ಯ ಹೆಮ್ಮೆಯಿಂದ ಅಪ್ಪಿಕೊಂಡು ಮುಂದಿನ ದಿನಗಳಲ್ಲಿ ವೀರರಾಗಿ ಹೋರಾಡಲು ಸ್ವಲ್ಪ ಪ್ರೇರಣೆ ಸಿಗುತದೆ ಎಂದರು.
ಮೊದಲಿಗೆ ಅಜಾದ್ ಸಂಘದ ಅಧ್ಯಕ್ಷ ಕವಿರಾಜ ಕೋರಿ ಸ್ವಾಗತಿಸಿದರು. ನ್ಯಾಯವಾದಿ ಹಾಗೂ ಸಂಘದ ಗೌರವಾಧ್ಯಕ್ಷ ಜೆ. ವಿನೋದ ಕುಮಾರ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು. ವಕೀಲರಾದ ಶಾಮ ಪೂಜಾರಿ, ರಾಜಕೀಯಧುರೀಣರಾದ ಸಿದ್ರಾಮಪ್ಪ ಸಾಹು ಜೇವರ್ಗಿ, ತಿಪ್ಪಣ್ಣ ಬಾಲಿಕಾಯಿ, ಸ್ವಾಮಿ, ಅಂಬರೇಶ್ ಪಡಿಶೆಟ್ಟಿ, ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.