3ನೇ ದಿನಕ್ಕೆ ಧರಣಿ ಶುದ್ಧ ನೀರು ಪೂರೈಸುವಂತೆ ಮುಖ್ಯಾಧಿಕಾರಿಗಳಿಗೆ ಒತ್ತಾಯ

0
68
ಆಳಂದ: ಶುದ್ಧ ಕುಡಿಯುವ ನೀರು ಇನ್ನಿತರ ಬೇಡಿಕೆಗೆ ಆರಂಭಿಸಿದ ಅನಿರ್ದಿಷ್ಟಾಧಿ ಧರಣಿ ನಿರತರು ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಆಳಂದ: ಪಟ್ಟಣದ ತಹಸೀಲ್ದಾರ ಕಚೇರಿಯ ಮುಂದೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಭಾರತೀಯ ಖೇತ್ ಮಜ್ದೂರ ಯುನಿಯನ್ ಹಾಗೂ ಅಖಿಲ ಭಾರತ ಕಿಸಾನಸಭಾ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶಾನಿವಾರ ೨ನೇ ದಿನಕ್ಕೆ ಕಾಲಿಟ್ಟಿದೆ.

ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಅವರಿಗೆ ಮುಖಂಡರು ಮನವಿ ಸಲ್ಲಿಸಿ ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀರಿನ ಸಮಸ್ಯೆ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗಿಲ್ಲ. ಪಟ್ಟಣದಲ್ಲೂ ಹೊಸ ಬಡಾವಣೆ ಸೇರಿ ಇನ್ನಿತರ ಕಡೆ ಸಾಕಷ್ಟು ನೀರಿನ ಸಮಸ್ಯೆ ಎದುರಾಗಿದೆ. ಅಲ್ಲದೆ, ಹಲವಾರು ದಿನಗಳಿಂದ ಶುದ್ಧ ಕುಡಿಯುವ ನೀರಿನ ಬೇಡಿಕೆಗೆ ನಾಗರಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೂ ಇದುವರೆಗೂ ಕುಡಿಯಲು ನೀರು ಒದಗಿಸುತ್ತಿಲ್ಲ. ಈ ಕೂಡಲೇ ಕ್ರಮಕೈಗೊಂಡು ಶುದ್ಧ ನೀರು ಒದಗಿಸಬೇಕು ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ಅವರು ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರು.

Contact Your\'s Advertisement; 9902492681

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿಗಳು, ನೀರು ಶುದ್ಧೀಕರಣ ಘಟಕದಲ್ಲಿ ಪೂರ್ಣವಾಗಿ ನೀರು ಶುದ್ಧೀಕರಿಸಲಾಗುತ್ತಿದೆ. ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಶುದ್ಧ ಘಟಕದ ಮೂಲಕ ಕಾರ್ಯಾರಂಭಿಸಲು ಈ ಕುರಿತು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇನ್ನೂಳಿದ ಬೇಡಿಕೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ಸೂಕ್ತ ಕಾಮಗಾರಿಗೆ ಸೂಚಿಸದ ಮೇಲೆ ಧರಣಿ ಹಿಂದಕ್ಕೆ ಪಡೆಯಲಾಗುವುದು ಎಂದು ಪ್ರತಿಭಟನಾ ನಿರತರು ಘೋಷಿಸಿದರು.

ಇಂದಿನ ಸತ್ಯಾಗ್ರಹಕ್ಕೆ ನ್ಯಾಯವಾದಿ ಸಂಜಯ ನಾಯಕ, ಪುರಸಭೆ ಸದಸ್ಯ ಧೋಂಡಿಬಾ ಸಾಳುಂಕೆ, ಷಣ್ಮೂಖಪ್ಪ ಹಡಪದ, ಅಹ್ಮೆದ ಅಲಿ ಚುಲಬುಲ, ಶಫಿ ಸಗರಿ, ಫಕ್ರೋದ್ಧೀನ್ ಸಾವಳಗಿ ಮತ್ತಿತರರು ಬೆಂಬಲಿಸಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here