ವೀರಾಪೂರು ಸಹಿಪ್ರಾ ಶಾಲೆಗೆ ಖಾಯಂ ಶಿಕ್ಷಕರನ್ನು ನೀಡಲು ಎಸ್ಎಫ್ಐ ಆಗ್ರಹ

0
94

ಲಿಂಗಸ್ಗೂರು: ತಾಲೂಕಿನ ವೀರಾಪೂರು ಗ್ರಾಮದ ಸರಕಾರಿ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ), ಎಸ್‌ಡಿಎಂಸಿ ಕಮಿಟಿ ಸದಸ್ಯರು ಆಗ್ರಹಿಸಿದ್ದಾರೆ.

ಶನಿವಾರದಂದು ಬಿಇಓ ಅವರಿಗೆ ಮನವಿ ಸಲ್ಲಿಸಿದ ಅವರು, ವೀರಾಪೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ. ಈ ಕುರಿತು ತಮಗೆ ಜೂನ್ ತಿಂಗಳಲ್ಲೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಕೂಡಲೇ ಮುಖ್ಯಗುರುಗಳು ಸೇರಿದಂತೆ ಇನ್ನೂ 3 ಖಾಯಂ ಶಿಕ್ಷಕರನ್ನು ನೀಡಬೇಕು. ನಿರ್ಲಕ್ಷ ಧೋರಣೆ ತೋರಿದರೆ ಎಸ್‌ಎಫ್‌ಐ ವೀರಾಪೂರು ಗ್ರಾಮ ಘಟಕ ಹಾಗೂ ಶಾಲೆಯ ಎಸ್‌ಡಿಎಂಸಿ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಸೇರಿ ಖಾಯಂ ಶಿಕ್ಷಕರನ್ನು ನೀಡಲು ಆಗ್ರಹಿಸಿ ಶಾಲೆ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪೂರು, ಗ್ರಾಮದ ಯುವ ಮುಖಂಡರಾದ ಮೌನೇಶ್ ತಳವಾರ್, ನಿಂಗಣ್ಣ ಪಾನ್‌ಶಾಪ್, ವೆಂಕಟೇಶ ಎ., ಬಸವರಾಜ್ ನಡುವಿನಮನಿ, ಎಸ್‌ಎಫ್‌ಐ ವೀರಾಪೂರು ಗ್ರಾಮ ಘಟಕದ ಕಾರ್ಯದರ್ಶಿ ರಾಜಮಹಮ್ಮದ್, ಉಪಾಧ್ಯಕ್ಷ ಬಸಲಿಂಗ, ಹುಚ್ಚರೆಡ್ಡಿ ದೊಡ್ಡಮನಿ, ಚೇತನ್ ದೊಡ್ಡಮನಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here