ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ

0
10

ಶಹಾಬಾದ: ಕೋವಿಡ್ ೩ ನೇ ಅಲೆಯ ಸಂದರ್ಭದಲ್ಲಿ ಜೀವ ರಕ್ಷಿಸಿ – ಜೀವನ ಉಳಿಸಿ – ಜೀವಿಸಲು ಬಿಡಿ ಎಂಬ ಅಭಿಯಾನದ ಭಾಗವಾಗಿ ಸೋಮವಾರ ಮನೆ ಮನೆ ಮುಂದೆ ಪ್ರತಿಭಟನೆಯ ಅಂಗವಾಗಿ ಎಸ್‌ಯುಸಿಐ (ಸಿ) ಹಾಗೂ ರಾಜ್ಯದ ಏಳು ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ನೂರಾರೂ ಸಂಖ್ಯೆಯಲ್ಲಿ ತಮ್ಮ ಮನೆ ಮನೆಗಳಲ್ಲಿ ಪ್ರತಿಭಟನೆಯನು ಮಾಡಿ ಸರ್ಕಾರಕ್ಕೆ ಒತ್ತಾಯಿಸಿದರು.

ಕೋವಿಡ್ ಸೋಂಕಿನ ೩ನೇ ಅಲೆ ಇಡೀ ದೇಶವನ್ನೇ ವ್ಯಾಪಿಸಿದೆ. ನಮ್ಮ ರಾಜ್ಯದಲ್ಲೂ ದೊಡ್ಡ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಮೊದಲ ಎರಡು ಅಲೆಗಳಲ್ಲಿ ಸಾವೀಗೀಡಾದ, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ, ಉದ್ಯೋಗ, ಆದಾಯ ಮೂಲ ಕಳೆದುಕೊಂಡ ಜನರ ಬದುಕು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಈಗ ಮತ್ತೆ ಲಾಕ್‌ಡೌನ್, ಕರ್ಫ್ಯೂಗಳ ಮೂಲಕ ರೋಗ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.

Contact Your\'s Advertisement; 9902492681

ಇಂತಹ ಪರಿಸ್ಥಿತಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತವು ಪರಿಸ್ಥಿತಿಯು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಎರಡು ಹಂತದ ಅಲೆಗಳಲ್ಲೂ ಜಿಲ್ಲೆಯ ಜನತೆ ಗಂಭೀರವಾಗಿ ತೊಂದರೆಗೀಡಾಗಿದ್ದರು. ಆರ್ಥಿಕವಾಗಿಯೂ ಕಂಗಾಲಾಗಿ ಸಾವಿರಾರು ಜನ ಕೆಲಸಗಳನ್ನು ಕಳೆದುಕೊಂಡು ವಲಸೆ ಮಾರ್ಗವನ್ನು ತುಳಿದಿದ್ದರು. ಈಗಲೂ ಆ ಎಲ್ಲಾ ಕುಟುಂಬಗಳ ಸ್ಥಿತಿಯು ಸುಧಾರಿಸಿಲ್ಲ ಎಂದರಲ್ಲದೇ, ವಿವಿಧ ಬೇಡಿಕೆಗಳಾದ ಕೋವಿಡ್ ೩ ನೇ ಅಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೀವನೋಪಾಯ ಕಳೆದುಕೊಂಡವರಿಗೆ ಅವಶ್ಯಕ ಪರಿಹಾರ ನೀಡಬೇಕು. ಕೋವಿಡ್ ಸೋಕಿತರಿಗೆ ಉಚಿತ, ಗುಣಮಟ್ಟದ ಚಿಕಿತ್ಸೆ ಒದಗಿಸಿ.

ಮೃತರಾದವರಿಗೆ ರೂ. ೪ ಲಕ್ಷ ಪರಿಹಾರ ನೀಡಿ. ಕೋವಿಡ್ ಯೋಧರಿಗೆ ಜೀವನ ಭದ್ರತೆ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ೨೦೦ ದಿನಗಳ ಕೆಲಸವನ್ನು ನೀಡಬೇಕು. ಕೂಲಿಯನ್ನು ರೂ. ೬೦೦ ಕ್ಕೆ ಏರಿಕೆ ಮಾಡಿ. ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸಿ. ಜನತೆ ಸಂಕಷ್ಟದಲ್ಲಿ ಇರುವುದರಿಂದ ಶಾಲಾ ಕಾಲೇಜುಗಳ ಶುಲ್ಕಗಳನ್ನು ಮನ್ನಾ ಮಾಡಬೇಕು. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಹೊಸ ಕಾರ್ಮಿಕ ವಿರೋಧಿ ಸಂಹಿತೆಗಳ ಜಾರಿಯನ್ನು ನಿಲ್ಲಿಸಿ. ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಮುಂತಾದ ಕಾರ್ಮಿಕರ ಖಾಯಮಾತಿಗೆ ಕಾಯಿದೆ ರೂಪಿಸಿ, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ.

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಮುಂತಾದ ಕೃಷಿ ಹಾಗೂ ಗ್ರಾಮೀಣ ಬದುಕಿಗೆ ಮಾರಕವಾದ ರಾಜ್ಯ ಸರ್ಕಾರದ ಕಾಯ್ದೆಗಳನ್ನು ಹಿಂಪಡೆಯಬೇಕು. ಸ್ವಾಮಿನಾಥನ್ ಸಮಿತಿಯ ಶಿಫಾರಸು ಪ್ರಕಾರ ಕನಿಷ್ಠ ಬೆಂಬಲಬೆಲೆ ಖಾತ್ರಿಪಡಿಸುವ ಶಾಸನ ಜಾರಿಗೊಳಿಸಿ. ರೈತರ, ಕೂಲಿಕಾರರ ಸಾಲಗಳನ್ನು, ಬಡ ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ಪಡೆದ ಸಾಲಗಳನ್ನು ಮನ್ನಾ ಮಾಡಿ.

ಶಿಕ್ಷಣವನ್ನು ವ್ಯಾಪಾರೀಕರಣ ಮಾಡುವ, ಧರ್ಮ ನಿರಪೇಕ್ಷತೆಗೆ ಧಕ್ಕೆ ತರುವ ಎನ್‌ಇಪಿ ಜಾರಿಯನ್ನು ರಾಜ್ಯದಲ್ಲಿ ಕೈಬಿಡಬೇಕೆಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here