ಚೀನ, ಆಧುನಿಕ ಸಾಹಿತ್ಯಕ್ಕೆ ಸೇತುವೆ ನಿರ್ಮಿಸಿದ ಮುದ್ದಣ್ಣ: ಲೇಖಕ ಎಚ್.ಬಿ.ಪಾಟೀಲ

0
30

ಕಲಬುರಗಿ: ಮುದ್ದಣ್ಣ ಎಂಬ ಕಾವ್ಯನಾಮದ ಲಕ್ಷ್ಮೀನಾರಾಯಣಪ್ಪ ಅವರು ಪ್ರಯೋಗಶೀಲ ವ್ಯಕ್ತಿತ್ವದ ಕವಿ. ಸಾಹಿತ್ಯ, ಸಂಗೀತ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದವರು. ’ಅದ್ಭುತ ರಾಮಾಯಣ’, ’ರಾಮ ಪಟ್ಟಾಭಿಷೇಕ’, ’ರಾಮಾಶ್ವಮೇಧ’, ’ರತ್ನಾವತಿ ಕಲ್ಯಾಣ’, ’ಕುಮಾರ ವಿಜಯ’, ’ಗೋದಾವರಿ’ ಎಂಬ ಕೃತಿಗಳನ್ನು ರಚಿಸಿ, ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯಕ್ಕೆ ಸೇತುವೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ರಾಮಮಂದಿರ ಸಮೀಪವಿರುವ ’ಕೊಹಿನೂರ ಡಿಗ್ರಿ ಕಾಲೇಜ್’ನಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಲಾಗಿದ್ದ ’ಮುದ್ದಣನವರ ೧೫೦ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಭಾಷೆಯ ವಿಚಾರದಲ್ಲಿ ಮುದ್ದಣ್ಣ ತಳಿದಿರುವ ಭಾವನೆ ಸರ್ವ ಜನಾದರಣೀಯವಾದದು. ಅತಿಯಾಗಿ ಸಂಸ್ಕೃತ ಬಳಸುವುದನ್ನು ನಿಷೇಧಿಸಿದ್ದಾರೆ. ’ಮುದ್ದಣ್ಣನ ಕಾವ್ಯಗಳು ಜಗತ್ತಿಗೊಂದು ದೊಡ್ಡ ಸಂದೇಶವನ್ನು ನೀಡುತ್ತಿವೆ. ಧನಿಕರಾಗುವುದ ಎಲ್ಲರಿಗೂ ಸಾಧ್ಯವಿಲ್ಲದಿರಬಹುದು. ಆದರೆ, ಪ್ರಯತ್ನದಿಂದ ಪ್ರತಿಯೊಬ್ಬರು ರಸಿಕರಾಗುವುದು ಸಾಧ್ಯ’ ಎಂಬ ಡಿ.ವಿ.ಜಿ ಅವರ ಮಾತು ಮುದ್ದಣ್ಣನವರ ಸಾಹಿತ್ಯದ ಸತ್ವದ ಉಲ್ಲೇಖವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಹಣಮಂತರಾಯ ಬಿ.ಕಂಟೆಗೋಳ, ಪ್ರಮುಖರಾದ ಡಾ.ಹರಿಶ್ಚಂದ್ರ ಎಸ್.ಬಿದನೂರಕರ್, ಆಕಾಶ ಮೂಲಗೆ, ಭೀಮಾಶಂಕರ ಜಮಾದಾರ, ಜಗದೀಶ ಹಿರೇಮಠ, ಸ್ನೇಹಾ ಅಲ್ದಿ, ಸ್ನೇಹಾ ಕುಂಬಾರ, ಪೂಜಾ ತಳಕೇರಿ, ಭವಾನಿ ಶೆಟ್ಟಿಮನಿ, ವೈಶ್ಣವಿ ಗುತ್ತೇದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here