ಶಹಾಬಾದ: ಬ್ರಿಟಿಷ ದಾಸ್ಯದಿಂದ ಮುಕ್ತಗೊಂಡು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ದೊರೆತ ಹಾಗೂ ಸಂವಿಧಾನ ಜಾರಿಗೆ ಬಂದ ದಿನವೇ ಪವಿತ್ರ ದಿನ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಬುಧವಾರ ನಗರಸಭೆಯಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮಗಳುಗಳನ್ನು ಪಾಲಿಸಬೇಕು ಎಂದೆಲ್ಲಾ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಭಾರತ ಸಂವಿಧಾನ. ಇದನ್ನು ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ. ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ೧೯೫೦ ಜನೇವರಿ ೨೬ ರಂದು ಅಂಗೀಕರಿಸಲ್ಪಟ್ಟಿತ್ತು. ಅಂದಿನ ದಿನವೇ ಪ್ರಜೆಗಳೇ ಪ್ರಭುಗಳಾದ ದಿನ ಗಣರಾಜ್ಯ ದಿನ ಎಂದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್,ಹಾಷಮ್‌ಖಾನ, ನಗರಸಭೆಯ ಸದಸ್ಯರಾದ ಲಕ್ಷ್ಮಿಬಾಯಿ ಕುಸಾಳೆ, ಸಾಬೇರಾ ಬೇಗಂ, ಡಾ.ಅಹ್ಮದ್ ಪಟೇಲ್, ತಿಪ್ಪಣ್ಣ ನಾಟೇಕಾರ,ರಜನಿಕಾಂತ ಕಂಬಾನೂರ,ಕಿರಣ ಚವ್ಹಾಣ,ಫಜಲ್ ಪಟೇಲ್, ಭರತ್ ರಾಠೋಡ, ಅನ್ವರ ಪಾಶಾ, ಅಮೃತ ತಳವಾರ, ಶರಣು ಪಗಲಾಪೂರ,ಮಹ್ಮದ್ ಇಮ್ರಾನ್, ಮರಲಿಂಗ ಕಮರಡಗಿ,ಶಂಕರ ಕೋಟನೂರ್ ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇತರರು ಇದ್ದರು.