ಗಣರಾಜ್ಯ ದಿನವನ್ನು ಧಾರ್ಮಿಕ ಹಬ್ಬಗಳಂತೆ ಆಚರಿಸುವಂತಾಗಬೇಕು: ಅಂಜಲಿ ಗಿರೀಶ

0
8

ಶಹಾಬಾದ: ಗಣರಾಜ್ಯ ದಿನವನ್ನು ನಾವೆಲ್ಲರೂ ಧಾರ್ಮಿಕ ಹಬ್ಬಗಳಂತೆ ಮನೆಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಬುಧವಾರ ನಗರದ ಮಡ್ಡಿ ಪ್ರದೇಶದಲ್ಲಿರುವ ಸನ್ ಲೈಟ್ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಗಣರಾಜ್ಯ ದಿನ ಎಂದರೆ ಸರಕಾರಿ ರಜೆ, ಅನ್ನವಷ್ಟರ ಮಟ್ಟಿಗೆ ಇಂದಿನ ಬಹುತೇಕ ಭಾರತೀಯ ಪ್ರಜೆಗಳು ಈ ಸುಂದರ ದಿನವನ್ನು ಅಥೈಸಿಕೊಂಡಂತಿರುವುದು ಮಾತ್ರ ದುರ್ದೈವ. ಈ ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶ ರಕ್ಷಣೆ, ನ್ಯಾಯಾಂಗ, ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂಥಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು ಎಂದು ಹೇಳಿದರು.

ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಸಮಾಜದ ಸರ್ವೋತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಯಶಸ್ವಿ ದೇಶದ ಕನಸು ಕಂಡು ಈ ದೇಶಕ್ಕಾಗಿ ಸಂವಿಧಾನ ರಚಿಸಿ, ದಾರಿ ಹಾಕಿಕೊಟ್ಟ ಮಹಾನ್ ನಾಯಕರ ಮತ್ತು ಮಹಾತ್ಮರ ಉದ್ದೇಶ ನಿಜವಾಗಿಯೂ ಸಾಕಾರಗೊಳ್ಳಬೇಕಾದರೆ ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗಬೇಕೆಂದು ಹೇಳಿದರು.

ನಗರಸಭೆಯ ಸದಸ್ಯರಾದ ರಜನಿಕಾಂತ ಕಂಬಾನೂರ, ಅವಿನಾಶ ಕಂಬಾನೂರ, ಮಹೇಶ ರಾಠೋಡ,ಧರ್ಮು ರಾಠೋಡ,ಬಸವರಾಜ, ಶಿಕ್ಷಕಿಯರಾದ ಮೇನಿಕಾ, ಸಾಬೇರಾ ಬೇಗಂ, ವಿತಾ ಕಾಂಬಳೆ, ಮೀನಾಕ್ಷಿ ಕಂಬಾನೂರ ಸೇರಿದಂತೆ ಶಾಲಾಮಕ್ಕಳು ಹಾಗೂ ಪಾಲಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here