ಅನುದಿನಂಗಳೆಂಬವು ಪ್ರಣತೆಯಾಗಿ, ವರುಷಂಗಳೆಂಬವು ಬತ್ತಿಯಾಗಿ, ಜೀವಜಾತಿಯ ಬೆಳಗಿನ ಬೆಳಗ ಬೆಳಗಿನಲರಸಬೇಕು, ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು, ಬೆಳಗುಳ್ಳಲ್ಲಿ ಆತನಿರಿಸಿದಂತೆ ಇರಬೇಕು, ಎಣ್ಣೆಯಂಬ ಜವ್ವನ ಸವೆಯದ ಮುನ್ನ,ಬೆಳಗು ಕತ್ತಲೆಯಾಗದ ಮುನ್ನ,ರೇಕಣ್ಣಪ್ರಿಯ ನಾಗಿನಾಥನ ಬೆಳಗ ಬೆಳಗಿನಲರಸಬೇಕು..!
ಜೀವನ ಎಂದರೆ ಒಂದು ಗಂಭೀರ ಸಮಸ್ಯೆ, ತೊಡಕು, ಹೋರಾಟ, ಪ್ರಶ್ನೆಗಳ ಪ್ರಶ್ನೆ ಮಹಾಪ್ರಶ್ನೆ,ಬಿಡಿಸಬಾರದು, ಬಿಡಿಸದಿರಬಾರದು. ಹೊರಗೆ ತೊಡಕು, ಒಳಗೆ ದರಿಸದೊಡಕು, ಹೊತ್ತು ಹೋಗದ ಮುನ್ನ. ಮೃತ್ಯು ಮುಟ್ಟದ ಮುನ್ನ. ಆಯುಷ್ಯವೆಂಬ ಎಣ್ಣೆ ಸವೆದು ಅರಿವಿನ ಮಾನವ ಪ್ರಾಣಿ ಮೃತ್ಯುವಿನ ಗಂಭೀರ ಕಾರ್ಗತ್ತಲಲ್ಲಿ ಮುಳುಗಿ ಕತ್ತಲೆಯಾಗುವುದಕ್ಕೂ ಮೊದಲೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು; ಪ್ರಶ್ನೆಗೆ ಉತ್ತರ ಕೊಡಬೇಕು, ಅಂದರೆ ಸತ್ತರೂ ಬದುಕುವ ಆಸೆ ಇದೆ. ಆತ್ಮವಿಶ್ವಾಸವಿದೆ. ಮೃತ್ಯೋರ್ಮಾ ಅಮೃತಂಗಮಯ ಎಂಬ ಮಾನವನ ಹೃದಯದ ಪುರಾತನಗೀತ ಚಿರಂತನ ಪ್ರಾರ್ಥನೆಯಾಗಿ ಮಂಗಳಾರತಿಯಾಗಿ, ಸಮಾಪ್ತ ಸಿದ್ಧಿಯಾಗಿ ನಿಂತಿದೆ.
ಜೀವನದಲ್ಲಿಯ ಪ್ರಶ್ನೆ ಸಮಸ್ಯೆಗಳಿಗಂತೂ ಲೆಕ್ಕವೇ ಇಲ್ಲ, ನನಗೆ ಅಥವಾ ನನ್ನಂತೆ ನಿಮಗೆ ಈ ಪ್ರಶ್ನೆಗಳ ಲೆಕ್ಕ ಲೆಕ್ಕಹತ್ತಿದಂತೆ ತೋರುತ್ತದೆ. ಏಕೆಂದರೆ ನನ್ನ ಪ್ರಶ್ನೆಗಳೇ ನನಗೆ ಪ್ರಶ್ನೆಗಳು, ನಿಮ್ಮ ಆತನ ಈತನ ಪ್ರಶ್ನೆಗಳು ನನಗೆ ಸುಸ್ಪಷ್ಟವಾಗಿ ಕಾಣುವುದಿಲ್ಲ. ಸಮಾಜ,ದೇಶ, ರಾಷ್ಟ್ರದ ಪ್ರಶ್ನೆಗಳು ಮತ್ತಷ್ಟು ನನ್ನಿಂದ ದೂರದೂರವಾಗುತ್ತಾ ಅಸ್ಪಷ್ಟದ ಸೀಮೆಯಲ್ಲಿ ಕಾಣದಾಗುತ್ತದೆ.
ಇನ್ನೂ ಎಲ್ಲ ಕಾಲ ದೇಶ ರಾಷ್ಟ್ರದ ಮಾನವ ಕುಲ ಕೋಟಿಯನ್ನು ಎದುರಿಸಿರುವ ಎದುರಿಸುತ್ತಿರುವ, ಎದುರಿಸಬಹುದಾದ ಪ್ರಶನೆಗಳಿಗಂತೂ ಕರಿಯ ಕತ್ತಲು, ಜೀವನದಲ್ಲಿ ಸಾಯುವವರೆಗೂ ಜೀವಂತವಾಗಿದ್ಧು, ಸಾಧ್ಯವಿದ್ದಷ್ಟು ಅಥವಾ ಶಕ್ತಿ ಮೀರಿ, ನಾನತ್ವದ ಬಳ್ಳಿಯನ್ನು ಹಬ್ಬಿಸುತ್ತಾ ಬೆಳೆದು ದೊಡ್ಡವರಾಗಿ ಈ ಹಬ್ಬುಗೆಗೆ ಅಡ್ಡ ಬಂದುದೆಲ್ಲಾ ತನ್ನ ವೈರಿ ಎಂದು ತಿಳಿದು ಕತ್ತರಿಸಿ ಕಡಿದು ಹಾಕಿ ತನಗೆ ಅನುಕೂಲವಾದುದೆಲ್ಲ ತನ್ನದೆಂದೂ ಭಾವಿಸಿ ತನ್ನ ಬಂಧು ಮಿತ್ರ ಬಾಂಧವರೆಂದು ವ್ಯಾಮೋಹದಿಂದ ಒಲಿದು ಪ್ರೀತಿಸಿ ಬೆಳೆಯುವಸ್ಟರಲ್ಲಿ ಹಣ್ಣು ಹಾಗಲಕಾಯಿ ಗೊಜ್ಜು ಚಟ್ನಿ ರೆಸಿಪಿಯಾಗಿ ಒಂದು ದಿನ ಎಣ್ಣೆ ತೀರಿದ ದೀವಿಗೆಯಂತೆ ತಣ್ಣಗೇ ಕತ್ತಲಾಗುವುದು ಇತಿಹಾಸವಾಗುವುದಿಲ್ಲ.
ಜೀವನದಲ್ಲಿ ಜೀವನದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಮ್ಮದಾಗಿರಬೇಕು, ನಮ್ಮ ಜೀವನ ಸಾರ್ಥಕ ಜೀವನ ಆಗಬೇಕು. ತಾನು ಬೆಳಗಿ ಮತ್ತೊಬ್ಬರ ಬೆಳಕಿಗೆ ಮಹಾಬೆಳಕಾಗಬೇಕು. ನಾನು ನನ್ನದು ನನ್ನಿಂದ ನನಗೆ ಎಂಬ ಭಾವನೆಗಳು ಬೆಳೆಸದೇ ನನ್ನದೆನ್ನುವುದೆಲ್ಲ ನಿನ್ನದೇ ಆಗಿರಲು ಎಂದು ದೇವರಲ್ಲಿ ಬಿನ್ನವಿಸಿಕೊಂಡು, ಜೀವನ ಸಾರ್ಥಕ ಮಾಡಿಕೊಂಡು ಧನ್ಯರಾಗಬೇಕು..!
- # ಡಾ.ಮಾತಾಜೀ ಬಸವಾಂಜಲಿದೇವಿ ಮಾತಾಜೀ
- # ನಿರೂಪಕ — ಕೆ.ಶಿವು.ಲಕ್ಕಣ್ಣವರ