ನಿಗದಿತ ಅವಧಿಗೆ ಕಾಮಗಾರಿಯನ್ನು ಪೂರ್ಣಗೊಳಿಸಿ: ರಾಜುಗೌಡ

0
19

ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ನಗರದ ರಂಗಂಪೇಟೆಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಯ ಟ್ಯಾಂಕರ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ರಂಗಂಪೇಟೆಯ ಕರ್ನಾಟಕ ಬಿಇಡ್ ಕಾಲೇಜ್ ಬಳಿಯಲ್ಲಿ ನಡೆಯುತ್ತಿರುವ ಟ್ಯಾಂಕರ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು,ಕಾಮಗಾರಿಯನ್ನು ವೀಕ್ಷಿಸಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸೂಚಿಸಿದರು.ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ಕಳಪೆಯಾಗದಂತೆ ನೋಡಿಕೊಳ್ಳಿ ಜನರ ಕುಡಿಯುವ ನೀರಿನ ಕೆಲಸ ಇದು ಒಳ್ಳೆಯ ಕಾಮಗಾರಿ ಮಾಡಿದರೆ ಜನರು ನಿಮ್ಮನ್ನು ಸ್ಮರಿಸುತ್ತಾರೆ.ಅಲ್ಲದೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು ತಿಳಿಸಿದರು.

Contact Your\'s Advertisement; 9902492681

ನಂತರ ಭೇಟಿ ನೀಡಿದ ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಭೇಟಿ ಆದಷ್ಟು ಶೀಘ್ರದಲ್ಲಿ ಮನೆ ನಿರ್ಮಿಸಿಕೊಡುವಂತೆ ವಿನಂತಿಸಿದ ಸಂತ್ರಸ್ತರಿಗೆ ಸದ್ಯ ನಿವೇಶನ ಇರುವವರು ನಗರಸಭೆಗೆ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದರು ಹಾಗು ನಿವೇಶನ ಇಲ್ಲದವರಿಗೆ ಮುಂದಿನ ದಿನಗಳಲ್ಲಿ ಸ್ಲಂ ಬೋರ್ಡ್ ಮನೆಗಳಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ನಂತರ ದೀವಳಗುಡ್ಡದಲ್ಲಿನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ನಂತರ ರಂಗಂಪೇಟೆಯ ಕರ್ನಾಕಟ ಪಬ್ಲಿಕ್ ಶಾಲೆಯ ಬಳಿಯ ಹಳೆಯ ಶಾಲಾ ಕಟ್ಟಡ ತೆರವುಗೊಳಿಸುತ್ತಿರುವ ಸ್ಥಳಕ್ಕೂ ಭೇಟಿ ನೀಡಿ ವೀಕ್ಷಿಸಿದರು.ನಂತರ ಮರಗಮ್ಮ ದೇವಸ್ಥಾನ ಕಾಮಗಾರಿ ನೋಡಿ ನಂತರ ಅಂಬಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್, ಮುಖಂಡರಾದ ವೇಣುಗೋಪಾಲ ಜೇವರ್ಗಿ,ಶ್ರೀನಿವಾಸ ದರಬಾರಿ,ಭೀಮಾಶಂಕರ ಬಿಲ್ಲವ್,ರಾಜು ಪುಲ್ಸೆ,ಪ್ರಸನ್ನ ಹೆಡಗಿನಾಳ,ಶ್ರೀನಿವಾಸ ಕಡೆಚೂರ, ನಗರಸಭೆ ಸದಸ್ಯರಾದ ಶಿವುಕುಮಾರ ಕಟ್ಟಿಮನಿ,ಮಹ್ಮದ್ ಗೌಸ್ ಕಿಣ್ಣಿ,ಮಲ್ಲೇಶಿ,ಹೊನ್ನಪ್ಪ ತಳವಾರ,ಹರೀಶ್ ತ್ರಿವೇದಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here