ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಂಸ್ಥೆಯಿಂದ ನಗರದ ರಂಗಂಪೇಟೆಯ ಜಿಹ್ವೇಶ್ವರ ಮಂದಿರದಲ್ಲಿ ನೇತ್ರಾವತಿ ಜ್ಞಾನ ವಿಕಾಸ ಕೇಂದ್ರ ಸಭೆಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಅಧ್ಯಕ್ಷತೆವಹಿಸಿದ್ದ ನಿರ್ಮಲ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಘಟಕದ ಅಧ್ಯಕ್ಷ ಪತ್ರಕರ್ತ ರಾಜು ಕುಂಬಾರ ಭಾಗವಹಿಸಿ ಮಹಿಳಾ ಶಿಕ್ಷಣದ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಕೀಲರಾದ ಶ್ರೀಕೃಷ್ಣಾ ಹಾಗು ಬಸವರಾಜ ಮಾತನಾಡಿ,ಮಹಿಳೆಯರಿಗೆ ಶಿಕ್ಷಣ ಎಂಬುದು ತುಂಬಾ ಮುಖ್ಯವಾಗಿದೆ.ಇಂದು ಮಹಿಳೆಯರು ಪುರುಷರಷ್ಟೆ ಸರಿ ಸಮಾನರಾಗಿದ್ದಾರೆ.ಎಲ್ಲಾ ರಂಗದಲ್ಲಿಯೂ ಬೆಳವಣಿಗೆ ಹೊಂದಿದ್ದಾರೆ.ಅದರಂತೆ ಮಹಿಳೆಯರು ಕಾನೂನುಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಮತ್ತು ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಪತ್ರಕರ್ತ ಮುರುಳಿಧರ ಅಂಬುರೆ, ಸಂಸ್ಥೆಯ ವಲಯ ಮೇಲ್ವಿಚಾರಕಿ ಬಸಮ್ಮ,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅವಿತಾ,ಸೇವಾ ಪ್ರತಿನಿಧಿ ಸುಪ್ರಿಯಾ ಸೇರಿದಂತೆ ಕೇಂದ್ರದ ಅನೇಕ ಸದಸ್ಯರು ಭಾಗವಹಿಸಿದ್ದರು.